
ಹುಬ್ಬಳ್ಳಿ: ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರಿನ ಹುಬ್ಬಳ್ಳಿ ಪ್ರಾದೇಶಿಕ ಕೇಂದ್ರದಲ್ಲಿ 69ನೇ ಕನ್ನಡ ರಾಜ್ಯೋತ್ಸವ, ಎಂ.ಪಿ.ಎ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿಶೇಷ ಸಿಂಡಿಕೇಟ್ ಸಭೆ ನಡೆಸಲಾಯಿತು.
ಕುಲಪತಿ ಪ್ರೊ.ನಾಗೇಶ್.ವಿ.ಬೆಟ್ಟಕೋಟೆ ಮಾತನಾಡಿ, ‘ವಿಶ್ವವಿದ್ಯಾಲಯದ ಈ ಪ್ರಾದೇಶಿಕ ಕೇಂದ್ರವನ್ನು ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅನುದಾನ ಪಡೆದು, ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಈ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ’ ಎಂದರು.
ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ, ರಂಗಗೀತೆ ಗಾಯನ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ಗೋಷ್ಠಿ ನಡೆಯಿತು.
ವಿಧಾನ ಪರಿಷತ್ ಸದಸ್ಯ ಮತ್ತು ಸಿಂಡಿಕೇಟ್ ಸದಸ್ಯ ಎಚ್.ಎಸ್.ಗೋಪಿನಾಥ ಮಾತನಾಡಿ, ‘ಸಂಗೀತ, ನಾಟಕ, ಭರತನಾಟ್ಯ ಹಾಗೂ ಇನ್ನಿತರ ಸಾಂಸ್ಕೃತಿಕ ಕಲೆಗಳು ವ್ಯಾಪಕವಾಗಿ ವಿಸ್ತಾರಗೊಂಡು ಈ ವಿಶ್ವವಿದ್ಯಾಲಯದ ಘನತೆಯನ್ನು ದೇಶದಲ್ಲಿ ಪಸರಿಸಬೇಕು. ಅತ್ಯುತ್ತಮವಾಗಿ ಕಲಾ ಪ್ರದರ್ಶನ ಮಾಡಿದ ವಿದ್ಯಾರ್ಥಿಗಳು ಅಭಿನಂದನೆಗೆ ಅರ್ಹರು‘ ಎಂದು ಶ್ಲಾಘಿಸಿದರು.
ಸಿಂಡಿಕೇಟ್ ಸದಸ್ಯೆ ದೀಪಿಕಾ ಶ್ರೀಕಾಂತ ಮಾತನಾಡಿದರು. ಕಲಾವಿದರಾದ ಟಿ.ರವೀಂದ್ರ ಶರ್ಮಾ, ವೈಷ್ಣವಿ ಹಾನಗಲ್, ಡಾ.ಶಶಿಧರ ನರೇಂದ್ರ ಅವರನ್ನು ಸನ್ಮಾನಿಸಲಾಯಿತು.
ಕಾತ್ಯಾಯಿನಿ ನಿರೂಪಿಸಿದರು. ಮಾರಣ್ಣ.ಬಿ.ಆರ್ ಸ್ವಾಗತಿಸಿದರು. ಸುಜಯ್ ಶಾನಭಾಗ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.