ADVERTISEMENT

‘ನಾನು ಹೆಣ್ಣು, ಹೋರಾಡಬಲ್ಲೆ’ ವಿಡಿಯೊ ಸ್ಪರ್ಧೆ- ಪುಷ್ಪಾ ಅಮರನಾಥ್‌

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 13:40 IST
Last Updated 27 ಮಾರ್ಚ್ 2022, 13:40 IST
ಪುಷ್ಪಾ ಅಮರನಾಥ್‌
ಪುಷ್ಪಾ ಅಮರನಾಥ್‌   

ಹುಬ್ಬಳ್ಳಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾಕಾಂಗ್ರೆಸ್ ವತಿಯಿಂದ ‘ನಾನು ಹೆಣ್ಣು, ಹೋರಾಡಬಲ್ಲೆ’ ಎಂಬ ವಿಡಿಯೊ ಸ್ಪರ್ಧೆಆಯೋಜಿಸಲಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ತಾವು ನಡೆದು ಬಂದ ದಾರಿ ಕುರಿತು ಹಾಗೂ ತಮ್ಮ ಸ್ಫೂರ್ತಿದಾಯಕ ಅನುಭವಗಳ ಕುರಿತು ಮೂರು ನಿಮಿಷಗಳ ವಿಡಿಯೊ ಮಾಡಿ ಕಳುಹಿಸಬೇಕು. 18 ವರ್ಷದೊಳಗಿನವರು, 18ರಿಂದ 35 ವರ್ಷದೊಳಗಿನವರು ಹಾಗೂ 35 ವರ್ಷ ಮೇಲಿನವರು ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ’ ಎಂದರು.

‘ಪ್ರತಿ ವಿಭಾಗದಿಂದ ಇಬ್ಬರಂತೆ ಆರು ವಿಜೇತರನ್ನು ಆಯ್ಕೆಮಾಡಲಾಗುವುದು. ಆಯ್ಕೆಯಾದ ವಿಡಿಯೊಗಳನ್ನು ರಾಷ್ಟ್ರಮಟ್ಟಕ್ಕೆ ಕಳುಹಿಸಲಾಗುವುದು. ಏಪ್ರಿಲ್‌ 14ರ ಅಂಬೇಡ್ಕರ್‌ ಜಯಂತಿ ದಿನದಂದು ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಆಯ್ಕೆಯಾದ ವಿಜೇತರಿಗೆ ಬಹುಮಾನ ನೀಡಲಾಗುವುದು. ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ವಿಡಿಯೊಗಳನ್ನು ವಾಟ್ಸ್‌ ಆ್ಯಪ್‌ ಸಂಖ್ಯೆ– 9355418897 ಹಾಗೂ ಈ–ಮೇಲ್ LHLSHcontest@gmail.com ಏ. 8ರ ಒಳಗೆ ಕಳುಹಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ ಶೇ 40ರಷ್ಟು ಮಹಿಳೆಯರಿಗೆ ಟಿಕೆಟ್‌ ನೀಡಿತ್ತು. ಸೋಲು, ಗೆಲುವು ಸಾಮಾನ್ಯ ಆದರೆ, ಮಹಿಳಾ ಮೀಸಲಾತಿ ನೀಡುವಲ್ಲಿ ಕಾಂಗ್ರೆಸ್‌ ಮುಂದಿದೆ. ಇದು ಎಲ್ಲ ರಾಜ್ಯದ ವಿಧಾನಸಭಾ ಚುನಾವಣೆಗೆ ಬುನಾದಿಯಾಗಿದೆ’ ಎಂದರು.

ಕಾಂಗ್ರೆಸ್‌ ನಾಯಕಿಯರಾದ ದೀಪಾಗೌರಿ, ಸುಜನ್ ಕಾಖಿ, ಲಕ್ಷ್ಮೀ ಹುದ್ದೆ ಹಾಗೂ ಕಲಾವತಿ ಗಿರಿಯಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.