ADVERTISEMENT

‘ಕೊಳಚೆ ಪ್ರದೇಶ ನಿವಾಸಿಗಳಿಗೆ ಅನ್ಯಾಯ’

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 15:31 IST
Last Updated 28 ಸೆಪ್ಟೆಂಬರ್ 2024, 15:31 IST

ಹುಬ್ಬಳ್ಳಿ: ಕೊಳಚೆ ಪ್ರದೇಶಗಳಲ್ಲಿ ಭೂ ಮಾಲೀಕರು ಬಹುತೇಕ ನಿವಾಸಿಗಳಿಗೆ ಕಿರುಕುಳ ದೌರ್ಜನ್ಯ ನೀಡುತ್ತಿರುವುದರಿಂದ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯ ಎಂದು ಧಾರವಾಡ ಜಿಲ್ಲೆ ಕೊಳಚೆ ಪ್ರದೇಶ ನಿವಾಸಿಗಳ ಅಸೋಸಿಯೇಶನ್ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಮೀದಸಾಬ ಕೊಪ್ಪದ, ‘ ಸರ್ಕಾರದ ಗಮನ ಸೆಳೆದು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಬಡವರ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ, ಜನರಿಗೆ ನ್ಯಾಯ ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ’ ಎಂದರು.

ಪ್ರಧಾನ ಕಾರ್ಯದರ್ಶಿ ನವೀನಕುಮಾರ ಮಾತನಾಡಿ, ‘ಕೊಳಚೆ ಪ್ರದೇಶದಲ್ಲಿ ಭೂಮಾಲೀಕರು ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಅದನ್ನು ಸಹಿಸುವುದಿಲ್ಲ. ಈ ಅನ್ಯಾಯದ ವಿರುದ್ಧ ಹೋರಾಡಲು ಸನ್ನದ್ಧರಾಗಿರಬೇಕು’ ಎಂದರು.

ADVERTISEMENT

ಕೆಲ ಅಧಿಕಾರಿಗಳು ಭೂಮಾಲೀಕರ ಜೊತೆಗೂಡಿ, ದೌರ್ಜನ್ಯ ಎಸಗಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಅಸೋಸಿಯೇಶನ್ ಉಪಾಧ್ಯಕ್ಷ ಅಲ್ಲಾಭಕ್ಷ ಕಿಲ್ಲೆದಾರ, ಅಲ್ಲಾಭಕ್ಷ ಜಕಾತಿ, ಜಾನ ಪವಾರ್, ಜಾಂಗಿರಸಾಬ ಯರಗಟ್ಟಿ, ಗುಲ್ಮಹಮ್ಮದ ಕಿಲ್ಲೆದಾರ, ಇಮಾಮಹುಸೇನ ಧಾರವಾಡ, ಹಾಗೂ ಅಸೋಸಿಯೇಶನ್ ಮುಖಂಡರು ಬಾರಾಕೋಟ್ರಿ ಪ್ರದೇಶದ ನಿವಾಸಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.