ADVERTISEMENT

ಪ್ರಜಾವಾಣಿ ಲೇಖನಗಳೇ ‍ಪ್ರೇರಣೆ: ಲತೀಫ್‌

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 15:15 IST
Last Updated 27 ಜೂನ್ 2020, 15:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
"ಲತೀಫ್‌ ಶೌಕತ್‌ ಅಲಿ ಕುನ್ನಿಭಾವಿ "

ಹುಬ್ಬಳ್ಳಿ: ನೀರಿನ ಮಹತ್ವ, ನೀರು ಉಳಿತಾಯದ ಅನಿವಾರ್ಯತೆ, ಜಲಕ್ಕಾಗಿ ಜನ ಪಡುತ್ತಿರುವ ಸಂಕಟ ಹೀಗೆ ವಿವಿಧ ಆಯಾಮಗಳ ಬಗ್ಗೆ ಲೇಖನಗಳ ಮೂಲಕ ಮೇಲಿಂದ ಮೇಲೆ ಬೆಳಕು ಚೆಲ್ಲಿದ ‘ಪ್ರಜಾವಾಣಿ’ ವರದಿಗಳೇ ನನ್ನ ಬರವಣಿಗೆಗೆ ಸ್ಫೂರ್ತಿ ಎಂದು ಲತೀಫ್‌ ಶೌಕತ್‌ ಅಲಿ ಕುನ್ನಿಭಾವಿ ಹೇಳಿದರು.

ಪತ್ರಿಕೆಯಲ್ಲಿ ಸಂಗತ, ಅಂಕಣಗಳು ಮತ್ತು ಗದಗ ಜಿಲ್ಲೆಯಲ್ಲಿ ಪ್ರಕಟವಾದ ಲೇಖನಗಳನ್ನು ಅವರು ತಮ್ಮ ಪಿಎಚ್‌.ಡಿ. ಪ್ರಬಂಧಕ್ಕೆ ಬಳಸಿಕೊಂಡಿದ್ದಾರೆ. ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯಕ್ಕೆ ಅವರು ಮಂಡಿಸಿದ ‘ಜಲ ಜಾನಪದ ಜಲಸಮಸ್ಯೆ ಪರಿಹಾರ ಮತ್ತು ಸಂವಹನದ ಪ್ರಭಾವ (ಗದಗ ಜಿಲ್ಲೆಯನ್ನು ಅನುಲಕ್ಷಿಸಿ)’ ವಿಷಯಕ್ಕೆ ಮಹಾಪ್ರಬಂಧ ಲಭಿಸಿದೆ. ಆಂಧ್ರದ ಕುಪ್ಪಂ ದ್ರಾವಿಡಿಯನ್‌ ವಿಶ್ವವಿದ್ಯಾಲಯದ ಜಾನಪದ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಎಂ.ಎನ್. ವೆಂಕಟೇಶ ಮಾರ್ಗದರ್ಶನ ಮಾಡಿದ್ದರು.

ಕಾರ್ಮಿಕ ರಾಜ್ಯ ವಿಮಾ ವೈದ್ಯಕೀಯ ಸೇವೆಯಲ್ಲಿ ಕಚೇರಿ ಅಧೀಕ್ಷಕರಾಗಿರುವ ಲತೀಫ್‌ ‘ಮಹಾಪ್ರಬಂಧಕ್ಕಾಗಿ ಅಧ್ಯಯನ ನಡೆಸಿದಾಗ ನೀರಿನ ಮಹತ್ವದ ಬಗ್ಗೆ ಪ್ರಜಾವಾಣಿ ಸರಣಿ ವರದಿಗಳನ್ನು ಪ್ರಕಟಿಸಿತು. ವಿಶೇಷವಾಗಿ ಗದಗ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಕಟವಾದ ಲೇಖನಗಳು ಜನರಲ್ಲಿ ನೀರಿನ ಮಹತ್ವ ಹೆಚ್ಚಿಸಿದವು. ನಿವೃತ್ತಿಯಾದ ಬಳಿಕವೂ ಜಲ ಸಂರಕ್ಷಣೆಗೆ ಕೆಲಸ ಮಾಡಲು ನಿರ್ಧರಿಸಿದ್ದೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.