ADVERTISEMENT

ವಿಮಾನ ನಿಲ್ದಾಣದಲ್ಲಿ ಐಎಲ್‌ಎಸ್‌ ಸೌಲಭ್ಯ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 3:17 IST
Last Updated 14 ಆಗಸ್ಟ್ 2021, 3:17 IST
ಹುಬ್ಬಳ್ಳಿಯಲ್ಲಿ ಗುರುವಾರ ಇನ್‌ಸ್ಟ್ರುಮೆಂಟಲ್‌ ಲ್ಯಾಂಡಿಂಗ್‌ ಸಿಸ್ಟಮ್‌ (ಐಎಲ್‌ಎಸ್‌) ಸೌಲಭ್ಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿಮಾನ ನಿಲ್ದಾಣದ ಸಿಬ್ಬಂದಿ
ಹುಬ್ಬಳ್ಳಿಯಲ್ಲಿ ಗುರುವಾರ ಇನ್‌ಸ್ಟ್ರುಮೆಂಟಲ್‌ ಲ್ಯಾಂಡಿಂಗ್‌ ಸಿಸ್ಟಮ್‌ (ಐಎಲ್‌ಎಸ್‌) ಸೌಲಭ್ಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿಮಾನ ನಿಲ್ದಾಣದ ಸಿಬ್ಬಂದಿ   

ಹುಬ್ಬಳ್ಳಿ: ಮೋಡಕವಿದ ವಾತಾವರಣ ಸೇರಿದಂತೆ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಸುಲಭ ಹಾಗೂ ಸುರಕ್ಷಿತವಾಗಿ ವಿಮಾನ ಲ್ಯಾಂಡಿಂಗ್‌ ಮಾಡಲು ನೆರವಾಗುವ ಇನ್‌ಸ್ಟ್ರುಮೆಂಟಲ್‌ ಲ್ಯಾಂಡಿಂಗ್‌ ಸಿಸ್ಟಮ್‌ನ (ಐಎಲ್‌ಎಸ್‌) ಸೌಲಭ್ಯವನ್ನು ಗುರುವಾರ ಉದ್ಘಾಟಿಸಲಾಯಿತು.

2020ರ ಜನವರಿಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯ ಆರಂಭವಾಗಿ, ಸೆಪ್ಟೆಂಬರ್‌ನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು. ಹಲವು ಬಾರಿ ಪರೀಕ್ಷೆಗಳ ಬಳಿಕ ಬಳಕೆಗೆ ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರ ಅಧಿಕೃತವಾಗಿ ಈಗ ಅನುಮತಿ ನೀಡಿದೆ. ಇದಕ್ಕಾಗಿ ಅಂದಾಜು ₹6.5 ಕೋಟಿ ವೆಚ್ಚವಾಗಿದೆ.

ಐಎಲ್‍ಎಸ್ ನೆಲಮಟ್ಟದಿಂದ ಕಾರ್ಯನಿರ್ವಹಿಸುವ ರೇಡಾರ್ ಆಧಾರಿತ ತಂತ್ರಜ್ಞಾನವಾಗಿದ್ದು, ಲ್ಯಾಂಡಿಂಗ್‌ ಮಾಡಲು ನಿಲ್ದಾಣದ ಸಿಬ್ಬಂದಿ ಅನುಮತಿಗೆ ಕಾಯುವುದು ಬೇಕಿಲ್ಲ. ಪ್ರತಿಕೂಲ ಪರಿಸ್ಥಿತಿಯಲ್ಲಿ ಲ್ಯಾಂಡ್‌ ಆಗಲು ತರಂಗದ ಮೂಲಕ ಪೈಲಟ್‌ಗೆ ಸಂದೇಶ ರವಾನಿಸುತ್ತದೆ. ರನ್‌ ವೇ ಪಕ್ಕದಲ್ಲಿ ಐಎಲ್‌ಎಸ್‌ ಸ್ಥಾಪಿಸಲಾಗಿದ್ದು, ಲಘುವಾದ ಆ್ಯಂಟಿನಾಗಳು ಇರುವ ಕಾರಣ ವಿಮಾನಗಳು ತಾಕಿದರೆ ನೆಲಕ್ಕೆ ಬೀಳುತ್ತವೆ. ವಿಮಾನವನ್ನು ಆಟೊ ಪೈಲಟ್‌ ಮೂಡ್‌ನಿಂದ ಲ್ಯಾಂಡಿಂಗ್‌ ಮಾಡಿ, ನಿಗದಿತ ಸಮಯಕ್ಕೆ ಟೇಕಾಫ್‌ ಆಗಲು ನೆರವಾಗುತ್ತದೆ.

ADVERTISEMENT

ಅಧಿಕೃತ ಉದ್ಘಾಟನಾ ಸಮಾರಂಭಕ್ಕೆ ಇಲ್ಲಿನ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಕುಮಾರ ಠಾಕರೆ ಸೇರಿದಂತೆ ವಿವಿಧ ವಿಮಾನ ಸಂಸ್ಥೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.