ಧಾರವಾಡ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾದ ಧನರಾಜ್‌ನನ್ನು ಗುರುವಾರ ನಗರ ಕೇಂದ್ರ ಕಾರಾಗೃಹಕ್ಕೆ ಕರೆತರಲಾಯಿತು. ಆರೋಪಿಗೆ 8629 ಕೈದಿ ಸಂಖ್ಯೆ ನೀಡಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಬಿಗಿ ಭದ್ರತೆಯಲ್ಲಿ ಆರೋಪಿಯನ್ನು ನಗರ ಕೇಂದ್ರ ಕಾರಾಗೃಹಕ್ಕೆ ಕರೆತರಲಾಯಿತು. ಮುಖ್ಯದ್ವಾರದಲ್ಲಿ ತಪಾಸಣೆ ನಡೆಸಿ, ಜೈಲಿನೊಳಕ್ಕೆ ಕರೆದೊಯ್ಯಲಾಯಿತು.
‘ಆರೋಪಿಯ ಆರೋಗ್ಯ ತಪಾಸಣೆ ನಡೆಸಿ, ಸೆಲ್‌ನಲ್ಲಿ ಇರಿಸಲಾಗಿದೆ. ಕೈದಿ ಸಂಖ್ಯೆಯನ್ನೂ ನೀಡಲಾಗಿದೆ. ಪ್ರತ್ಯೇಕ ವ್ಯವಸ್ಥೆ ಏನೂ ಮಾಡಿಲ್ಲ. ನಿಗಾ ವಹಿಸಲಾಗಿದೆ’ ಎಂದು ಜೈಲು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಆರೋಪಿಯನ್ನು ಧಾರವಾಡ ಜೈಲಿಗೆ ಕರೆತರುವ ಹಿನ್ನೆಲೆಯಲ್ಲಿ ಜೈಲು ಆವರಣದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಇನ್ನೊಬ್ಬ ಆರೋಪಿ ಪ್ರದೋಷ್ ಅವರನ್ನು ಧಾರವವಾಡಕ್ಕೆ ಬಂದ ವಾಹನದಲ್ಲಿ ಕರೆತಂದು, ಧನರಾಜ್ ಅವರನ್ನು ನಗರದ ಜೈಲಿನೊಳಗೆ ಕಳಿಸಿದ ನಂತರ ಬೆಳಗಾವಿಗೆ ಕರೆದೊಯ್ಯಲಾಯಿತು.
ಆರೋಪಿ ಧನರಾಜ್ ಬೆಂಗಳೂರಿನ ಗಿರಿನಗರ ನಿವಾಸಿ. ಮತ್ತೊಬ್ಬ ಆರೋಪಿ ಪವಿತ್ರಾಗೌಡ ಅವರ ಬುಟಿಕ್ ನಿರ್ವಹಣೆ ಮಾಡುತ್ತಿದ್ದರು. ಪವಿತ್ರಾ ಜೊತೆಗೆ ಪಟ್ಟಣಗೆರೆ ಶೆಡ್ ಹೋಗಿದ್ದರು ಹಾಗೂ ಮೆಗ್ಗರ್ ಬಳಸಿ ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡಿ, ಹಲ್ಲೆ ನಡೆಸಿದ್ದರು. ಮೃತದೇಹ ಸಾಗಿಲು ಸಹಾಯ ಮಾಡಿದ್ದ ಆರೋಪ ಅವರ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.