ADVERTISEMENT

ಜಿನದತ್ತ ದೇಸಾಯಿ, ರಾಜೇಂದ್ರ ಚೆನ್ನಿಗೆ ‘ಅಂಬಿಕಾತನಯದತ್ತ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 5:20 IST
Last Updated 25 ಜನವರಿ 2023, 5:20 IST
ಡಾ. ಜಿನದತ್ತ ಹಡಗಲಿ
ಡಾ. ಜಿನದತ್ತ ಹಡಗಲಿ   

ಧಾರವಾಡ: ಇಲ್ಲಿನ ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ವತಿಯಿಂದ ನೀಡಲಾಗುತ್ತಿರುವ 2023ನೇ ಸಾಲಿನ ‘ಅಂಬಿಕಾತನಯದತ್ತ’ ರಾಷ್ಟ್ರೀಯ ಪ್ರಶಸ್ತಿಗೆ ಕವಿ ಡಾ.ಜಿನದತ್ತ ದೇಸಾಯಿ ಹಾಗೂ ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಆಯ್ಕೆಯಾಗಿದ್ದಾರೆ.

‘₹1 ಲಕ್ಷ ಮೌಲ್ಯದ ಈ ಪ್ರಶಸ್ತಿಯನ್ನು ಈ ಇಬ್ಬರಿಗೆ ಹಂಚಲಾಗಿದೆ. ಬೇಂದ್ರೆ ಅವರ 127ನೇ ಜನ್ಮದಿನದ ಸಂದರ್ಭದಲ್ಲಿ ಜ. 31ರಂದು ಬೇಂದ್ರೆ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರಶಸ್ತಿ ಪ್ರದಾನ ಮಾಡುವರು’ ಎಂದು ಟ್ರಸ್ಟ್‌ನ ಅಧ್ಯಕ್ಷ ಡಾ.ಡಿ.ಎಂ.ಹಿರೇಮಠ ತಿಳಿಸಿದರು.

‘ಕುವೆಂಪು ಹಾಗೂ ಬೇಂದ್ರೆ ಅವರನ್ನು ಕನ್ನಡಾಂಬೆಯ ಎರಡು ಕಣ್ಣುಗಳಿದ್ದಂತೆ ಎಂದು ಬಣ್ಣಿಸಲಾಗಿದೆ. ಆದರೆ ಅನುದಾನ ಹಂಚಿಕೆಯಲ್ಲಿ ಒಂದು ಕಣ್ಣಿಗೆ ಬೆಣ್ಣೆ ಹಾಗೂ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ವರಕವಿ ಅವರ ಜನ್ಮದಿನವನ್ನು ‘ವಿಶ್ವ ಕವಿ ದಿನ’ ಎಂದು ಘೋಷಿಸುವಂತೆ ಕಳೆದ ಮೂರು ವರ್ಷಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲೇ ಬರಲಾಗಿದೆ. ಹೀಗಿದ್ದರೂ ಅದನ್ನು ಸರ್ಕಾರ ಪರಿಗಣಿಸದಿರುವುದು ಬೇಸರದ ಸಂಗತಿ’ ಎಂದು ಡಾ. ಹಿರೇಮಠ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.