ADVERTISEMENT

ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯ: ಜಿಗಳೂರ, ಹನಶಿ ಶಾಲೆ ಪ್ರಥಮ

ಗುಡಿಸಾಗರ: ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 4:02 IST
Last Updated 26 ಸೆಪ್ಟೆಂಬರ್ 2022, 4:02 IST
ಅಣ್ಣಿಗೇರಿ ಸಮೀಪದ ಗುಡಿಸಾಗರದಲ್ಲಿ 14 ಮತ್ತು 17 ವಯೋಮಿತಿಯೊಳಗಿನ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಗಣ್ಯರು ಚಾಲನೆ ನೀಡಿದರು
ಅಣ್ಣಿಗೇರಿ ಸಮೀಪದ ಗುಡಿಸಾಗರದಲ್ಲಿ 14 ಮತ್ತು 17 ವಯೋಮಿತಿಯೊಳಗಿನ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಗಣ್ಯರು ಚಾಲನೆ ನೀಡಿದರು   

ಪ್ರಜಾವಾಣಿ ವಾರ್ತೆ

ಅಣ್ಣಿಗೇರಿ: ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಸಹ ಮುಖ್ಯ. ಕ್ರೀಡೆಯಿಂದ ಮನುಷ್ಯನ ಆರೋಗ್ಯ ಉತ್ತಮವಾಗುತ್ತದೆ ಎಂದು ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಬಸವರಾಜ ತೊಗರಿ ಹೇಳಿದರು.

ಗುಡಿಸಾಗರ ಗ್ರಾಮದಲ್ಲಿ ಹಮ್ಮಿಕೊಂ
ಡಿದ್ದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ ಮಾತನಾಡಿದರು.

ಕ್ರೀಡಾಕೂಟದ ಧ್ವಜಾರೋಹಣ
ವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಲಕ್ಷ್ಮೀಬಾಯಿ ಜಂಗಣ್ಣವರ ನೆರವೇರಿಸಿ
ದರು. ಜಿಲ್ಲಾ ಉಪನಿರ್ದೇಶಕರ ಕಾರ್ಯಾಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ ಕ್ರೀಡಾ ಕೂಟದ ಉದ್ಘಾಟನೆ ಮಾಡಿ
ದರು. ಅಣ್ಣಿಗೇರಿ ಎಪಿಎಂಸಿ ಮಾಜಿ ಅಧ್ಯಕ್ಷ ಗುರುನಾಥಗೌಢ ಉಳ್ಳಾಗಡ್ಡಿ ಕಬಡ್ಡಿ ಅಂಕಣ ಉದ್ಘಾಟಿಸಿದರು.

14ರ ವಯೋಮಿತಿ ಒಳಗಿನ ಬಾಲಕಿ
ಯರ ವಿಭಾಗದಲ್ಲಿ ಕುಂದಗೋಳ ತಾಲ್ಲೂ
ಕಿನ ಜಿಗಳೂರ ಸರ್ಕಾರಿ ಹಿರಿಯ ‍ಪ್ರಾಥಮಿಕ ಶಾಲೆ ಪ್ರಥಮ, ನವಲಗುಂದ ತಾಲ್ಲೂಕಿನ ಹನಶಿ ಹಿರಿಯ ಸರ್ಕಾರಿ ಪ್ರಾಥಮಿಕ ಆಲೆ ಪ್ರಥಮ ಸ್ಥಾನ ಪಡೆದಿದೆ.

17 ವಯೋಮಿತಿ ಒಳಗಿನ ಬಾಲಕಿ
ಯರ ವಿಭಾಗದಲ್ಲಿ ಶಿರಗುಪ್ಪಿಯ ಪಂಡಿತ್ ನೆಹುರೂ ಪ್ರೌಢ ಶಾಲೆ ಪ್ರಥಮ ಹಾಗೂ ಬಾಲಕರ ವಿಭಾಗದಲ್ಲಿ ಹೊಲ್ತಿ
ಕೋಟಿಯ ಸರ್ಕಾರಿ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆದು ಬೆಳಗಾವಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿವೆ.

ನಾಗಲಿಂಗಪ್ಪ ಉಳ್ಳಾಗಡ್ಡಿ, ಎನ್.ವಿ.ಬಿಡಿ, ಎ.ಬಿ.ಕೊಪ್ಪದ, ಎಲ್.ವೈ.
ರಾಯಪ್ಪನವರ, ಎನ್.ಸಿ.ಕುರವತ್ತಿಮಠ, ವಿ.ಆರ್. ಹಾದಿಮನಿ, ಆರ್.ಎಚ್. ನೇಗಲಿ, ಎಲ್.ಎ.ಮಠ, ಸಂತೋಷ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.