ADVERTISEMENT

ಶಿರೂರ, ಸುಜಾತಾಗೆ ಕಲಬುರ್ಗಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 18:44 IST
Last Updated 20 ನವೆಂಬರ್ 2025, 18:44 IST
ಬಿ.ವಿ.ಶಿರೂರ
ಬಿ.ವಿ.ಶಿರೂರ   

ಧಾರವಾಡ: ನಗರದ ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ನೀಡುವ ಸಂಶೋಧನಾ ಪ್ರಶಸ್ತಿಗೆ ಹುಬ್ಬಳ್ಳಿಯ ಸಂಶೋಧಕ ಬಿ.ವಿ.ಶಿರೂರ ಮತ್ತು ವಚನ ಸಂಗೀತ ಪ್ರಶಸ್ತಿಗೆ ಧಾರವಾಡದ ಹಿಂದುಸ್ತಾನಿ ಸಂಗೀತ ಕಲಾವಿದೆ ಸುಜಾತಾ ಗುರವ ಆಯ್ಕೆಯಾಗಿದ್ಧಾರೆ.

ಸಂಶೋಧನಾ ಪ್ರಶಸ್ತಿಯು ₹ 50 ಸಾವಿರ ನಗದು ಮತ್ತು ವಚನ ಸಂಗೀತ ಪ್ರಶಸ್ತಿಯು ₹ 25 ಸಾವಿರ ನಗದು ಪುರಸ್ಕಾರ, ಸ್ಮರಣಿಕೆ ಒಳ‌ಗೊಂಡಿದೆ. ನವೆಂಬರ್ 28ರಂದು ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ನಡೆಯುವ ಎಂ.ಎಂ.ಕಲಬುರ್ಗಿ ಅವರ 87ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಸುಜಾತಾ ಗುರವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT