ADVERTISEMENT

ಕಲಘಟಗಿ: ಅರ್ಚಕ, ಪುರೋಹಿತರ ಸಂಘದ ಪ್ರತಿಭಟನೆ

ರೇಣುಕಾಚಾರ್ಯರ ಜಯಂತಿ ಕಾಟಾಚರಕ್ಕೆ ಆಚರಣೆ ಆರೋಪ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 4:56 IST
Last Updated 8 ಮಾರ್ಚ್ 2023, 4:56 IST
ಕಲಘಟಗಿ ತಾಲ್ಲೂಕು ಆಡಳಿತವು ಕಾಟಾಚಾರಕ್ಕೆ ರೇಣುಕಾಚಾರ್ಯರ ಜಯಂತಿ ಆಚರಿಸಿದೆ ಎಂದು ಆರೋಪಿಸಿ ರೇವಣಸಿದ್ಧ ಶಿವಾಚಾರ್ಯರ ನೇತೃತ್ವದಲ್ಲಿ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ ಅವರು ಸ್ವಾಮೀಜಿ ಬಳಿ ಕ್ಷಮೆ ಕೇಳಿ, 10 ದಿನಗಳ ಒಳಗಾಗಿ ಮತ್ತೆ ಜಯಂತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು
ಕಲಘಟಗಿ ತಾಲ್ಲೂಕು ಆಡಳಿತವು ಕಾಟಾಚಾರಕ್ಕೆ ರೇಣುಕಾಚಾರ್ಯರ ಜಯಂತಿ ಆಚರಿಸಿದೆ ಎಂದು ಆರೋಪಿಸಿ ರೇವಣಸಿದ್ಧ ಶಿವಾಚಾರ್ಯರ ನೇತೃತ್ವದಲ್ಲಿ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು. ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ ಅವರು ಸ್ವಾಮೀಜಿ ಬಳಿ ಕ್ಷಮೆ ಕೇಳಿ, 10 ದಿನಗಳ ಒಳಗಾಗಿ ಮತ್ತೆ ಜಯಂತಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಭರವಸೆ ನೀಡಿದರು   

ಕಲಘಟಗಿ: ತಾಲ್ಲೂಕು ಆಡಳಿತವು ಕಾಟಾಚರಕ್ಕೆ ರೇಣುಕಾಚಾರ್ಯರ ಜಯಂತಿ ಆಚರಣೆ ಮಾಡಿದೆ ಎಂದು ಆರೋಪಿಸಿ ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ, ತಾಲ್ಲೂಕು ಅರ್ಚಕ ಹಾಗೂ ಪುರೋಹಿತ ಸಂಘದ ವತಿಯಿಂದ ಪಟ್ಟಣದ ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯರ ನೇತೃತ್ವದಲ್ಲಿ ತಹಶೀಲ್ದಾರ್‌ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಯಿತು.

ರೇವಣಸಿದ್ಧ ಶಿವಾಚಾರ್ಯರು ಮಾತನಾಡಿ, ‘ಮಹನೀಯರ ಜಯಂತಿ ಗೌರವ-ಭಕ್ತಿಯಿಂದ ಆಚರಿಸಬೇಕು. ಸಮಾಜದವರನ್ನು ಆಹ್ವಾನಿಸಿ ಮಹಾನ್ ಚೇತನಗಳ ಆದರ್ಶಗಳ ಮೆಲುಕು ಹಾಕಬೇಕು’ ಎಂದರು. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂದು ಶ್ರೀಗಳು ತಹಶೀಲ್ದಾರ್‌ಗೆ ತಾಕೀತು ಮಾಡಿದರು.

ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಂಗಾರೇಶ ಹಿರೇಮಠ ಮಾತನಾಡಿ, ಭಾನುವಾರ ಕಾಟಾಚಾರಕ್ಕೆ ಜಯಂತಿ ಆಚರಿಸಲಾಗಿದೆ ಎಂದರು.

ADVERTISEMENT

ಕ್ಷಮೆ ಕೇಳಿದ ತಹಶೀಲ್ದಾರ್: ‘ತಾಲ್ಲೂಕು ಆಡಳಿತದಿಂದ ತಪ್ಪಾಗಿದೆ. ಈ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವೆ. ಮುಂದಿನ 10 ದಿನಗೊಳಗಾಗಿ ಸಮಾಜದವರ ಸಭೆ ಕರೆದು ಅದ್ಧೂರಿಯಾಗಿ ರೇಣುಕಾಚಾರ್ಯರ ಜಯಂತಿ ಆಚರಿಸಲಾಗುವುದು’ ಎಂದು ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ ಭರವಸೆ ನೀಡಿದರು. ಸ್ವಾಮೀಜಿ ಪಾದಕ್ಕೆ ನಮಸ್ಕರಿಸಿ, ಕ್ಷಮೆ ಕೇಳಿದರು.

ಜಂಗಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚನ್ನಯ ಹಿರೇಮಠ, ಉಪಾಧ್ಯಕ್ಷ ಎಸ್.ವಿ ತಡಸಮಠ, ಅಜ್ಜಯ್ಯ ಹಿರೇಮಠ, ಶಿವಯ್ಯ ತೇಗುರ ಮಠ, ಮಂಜುನಾಥ ಲೂತಿಮಠ, ಚನ್ನಯ ತಾವರಗೇರಿ, ಶಿವಾನಂದ ಹಿರೇಮಠ, ಕಲ್ಲಯ್ಯ ಹಿರೇಮಠ, ಶಿವಪುತ್ರಯ್ಯ ತೇಗುರಮಠ, ಶಂಕರಗೌಡ ಭಾವಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.