ADVERTISEMENT

ಕಲಘಟಗಿ: ಬಸವೇಶ್ವರ ಕಂಚಿನ ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 14:01 IST
Last Updated 1 ಜುಲೈ 2025, 14:01 IST
ಕಲಘಟಗಿ ಪಟ್ಟಣದ ಹನ್ನೆರಡು ಮಠದ ಆವರಣದಲ್ಲಿ ಬಸವೇಶ್ವರ ಕಂಚಿನ ಮೂರ್ತಿಗೆ ವಿವಿಧ ಸಮಾಜದ ಮುಖಂಡರು ಪೂಜೆ ಸಲ್ಲಿಸಿ, ಸ್ವಾಗತಿಸಿದರು
ಕಲಘಟಗಿ ಪಟ್ಟಣದ ಹನ್ನೆರಡು ಮಠದ ಆವರಣದಲ್ಲಿ ಬಸವೇಶ್ವರ ಕಂಚಿನ ಮೂರ್ತಿಗೆ ವಿವಿಧ ಸಮಾಜದ ಮುಖಂಡರು ಪೂಜೆ ಸಲ್ಲಿಸಿ, ಸ್ವಾಗತಿಸಿದರು   

ಕಲಘಟಗಿ: ಪಟ್ಟಣದ ಆಂಜನೇಯ ವೃತ್ತದ ಹತ್ತಿರ ಪ್ರತಿಷ್ಠಾಪನೆ ಮಾಡಲಿರುವ 12 ಅಡಿ ಎತ್ತರದ ಜಗಜ್ಯೋತಿ ಬಸವೇಶ್ವರರ ಕಂಚಿನ ಮೂರ್ತಿಯನ್ನು ವಿವಿಧ ಸಮಾಜದ ಮುಖಂಡರು ಬರಮಾಡಿಕೊಂಡರು.

ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಮಾಜಿ ಶಾಸಕ ದಿ.ಸಿ.ಎಂ ನಿಂಬಣ್ಣವರ ನಿವಾಸದಲ್ಲಿ ಇರಿಸಲಾಯಿತು.

ಮಾಜಿ ಶಾಸಕ ದಿ. ಸಿ.ಎಂ. ನಿಂಬಣ್ಣವರ ಅವಧಿಯಲ್ಲಿ 12 ಅಡಿ ಎತ್ತರದ ಕಂಚಿನ ಜಗಜ್ಯೋತಿ ಬಸವೇಶ್ವರರ ಮೂರ್ತಿ ತಯಾರಿಸಲು ಕೊಡಲಾಗಿತ್ತು.

ADVERTISEMENT

ಮುಂದಿನ ದಿನಗಳಲ್ಲಿ ಮೂರ್ತಿಯನ್ನು ಆಂಜನೇಯ ವೃತ್ತದ ಬಳಿ ಜಾಗ ಗುರುತಿಸಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಬಸವೇಶ್ವರ ಪ್ರತಿಷ್ಠಾಪನೆ ಸಮಿತಿಯವರು ತಿಳಿಸಿದರು.

ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಮುಖಂಡರಾದ ಶಶಿಧರ ನಿಂಬಣ್ಣವರ, ನಿಂಗಪ್ಪ ಸುತಗಟ್ಟಿ, ಐ.ಸಿ ಗೋಕುಲ, ಸದಾನಂದ ಚಿಂತಾಮಣಿ, ಎಫ್.ಕೆ.ನಿಗಧಿ, ಯಲ್ಲಾರಿ ಶಿಂಧೆ, ಅಶೋಕ ಆಡಿನವರ, ಬಸವರಾಜ ಶೇರೆವಾಡ, ಸುರೇಶ ಶೀಲವಂತರ, ವಿಜಯ ಬೆಣ್ಣಿ, ರಾಜಶೇಖರ ಶೀಲವಂತರ, ಚಂದ್ರಗೌಡ ಪಾಟೀಲ, ಶಶಿಧರ್ ಹುಲಿಕಟ್ಟಿ, ಬಸವರಾಜ ಕಡ್ಡಾಸ್ಕರ್, ಶಿವಪುತ್ರಯ್ಯ ತೇಗೂರಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.