ಕಲಘಟಗಿ: ‘ಗ್ರಾಹಕರ ಸಹಕಾರದಿಂದ ಕಲಘಟಗಿ ಅರ್ಬನ್ ಕೋ– ಆಪರೇಟಿವ್ ಬ್ಯಾಂಕ್ ₹14.9 ಲಕ್ಷ ಲಾಭದಲ್ಲಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಕುಮಾರ ಖಂಡೇಕರ ತಿಳಿಸಿದರು.
ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಜರುಗಿದ ಬ್ಯಾಂಕ್‌ನ 66ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘₹33.99 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ₹14.90 ಕೋಟಿ ಹೊಡಿಕೆ ಮಾಡಲಾಗಿದೆ’ ಎಂದರು.
ನಿರ್ದೇಶಕ ಮಂಜುನಾಥ ಮುರಳ್ಳಿ ಮಾತನಾಡಿ, ‘ಸಾಮಾನ್ಯರು, ದುಡಿಯುವ ವರ್ಗ, ರೈತರಿಗೆ ಹಾಗೂ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ₹17.03 ಕೋಟಿ ಸಾಲ ವಿತರಿಸಲಾಗಿದೆ’ ಎಂದರು.
ವ್ಯವಸ್ಥಾಪಕ ಗಂಗಾಧರ ಅಂಗಡಿ ವಾರ್ಷಿಕ ವರದಿ ಮಂಡಿಸಿದರು. ಉಪ್ಪಾಧ್ಯಕ್ಷೆ ಎಸ್.ಎಸ್. ತಡಸಮಠ, ನಿರ್ದೇಶಕರಾದ ಎಸ್.ಎಸ್. ಭರಮಗೌಡ್ರ, ವಿ.ಪಿ. ಪಟ್ಟಣಶೆಟ್ಟಿ, ಆರ್.ಸಿ. ಶೀಲವಂತರ, ರಮೇಶ ರೊಟ್ಟಿ, ರಾಕೇಶ ಅಳಗವಾಡಿ, ಎಸ್.ಕೆ. ಕುಬ್ಯಾಳ, ಪಿ.ಎಂ. ಪಾಲ್ಕರ, ಎಸ್.ಎಸ್. ತೇಗೂರಮಠ, ವಿ.ಎಸ್. ಉಡುಪಿ, ಎಸ್.ಡಿ. ಸಾಬಣ್ಣವರ, ಎಂ.ಜಿ. ದೇವಲಾಪುರ, ಎಸ್.ವೈ. ಕನಕಪ್ಪನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.