
ಧಾರವಾಡ: ಕರ್ನಾಟಕ ಬಾಲವಿಕಾಸ ಅಕಾಡೆಮಿ ನೀಡುವ 2022–23 ಮತ್ತು 2023–24ನೇ ಸಾಲಿನ ‘ಅಕಾಡೆಮಿ ಗೌರವ’ ‘ಮಕ್ಕಳ ಚಂದಿರ’, ‘ಅಕಾಡೆಮಿ ಬಾಲಗೌರವ’ ಹಾಗೂ ‘ವಿಶೇಷ ಗೌರವ’ ಪ್ರಶಸ್ತಿಗಳಿಗೆ 128 ಮಂದಿ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ತಿಳಿಸಿದರು.
‘ಅಕಾಡೆಮಿ ಗೌರವ ಪ್ರಶಸ್ತಿ ₹ 25 ಸಾವಿರ, ಮಕ್ಕಳ ಚಂದಿರ ಪ್ರಶಸ್ತಿ ₹ 15 ಸಾವಿರ, ಅಕಾಡೆಮಿ ಬಾಲಗೌರವ ಮತ್ತು ವಿಶೇಷ ಗೌರವ ಪ್ರಶಸ್ತಿ ತಲಾ ₹ 10 ಸಾವಿರ ನಗದು, ಸ್ಮರಣಿಕೆ ಒಳಗೊಂಡಿವೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ.16 ರಂದು ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪಾಲ್ಗೊಳ್ಳುವರು’ ಎಂದರು.
ಅಕಾಡೆಮಿ ಗೌರವ ಪ್ರಶಸ್ತಿ (2022–23): ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ–ತುಮಕೂರು (ಮಕ್ಕಳ ಸಾಹಿತ್ಯ), ಲಲಿತಾ ಕೆ.ಹೊಸಪ್ಯಾಟಿ–ವಿಜಯಪುರ (ಮಕ್ಕಳ ಸಾಹಿತ್ಯ), ಭಾಸ್ಕರ ಅಡ್ವಳ– ದಕ್ಷಿಣ ಕನ್ನಡ (ಮಕ್ಕಳ ಸಾಹಿತ್ಯ), ವಿ.ಎನ್.ಅಕ್ಕಿ –ರಾಯಚೂರು (ರಂಗಭೂಮಿ), ಎಸ್.ಎಫ್.ಹುಸೇನಿ– ಮೈಸೂರು (ಚಿತ್ರಕಲೆ), ಬೆಳಗಾವಿಯ ಮಾಹೇಶ್ವರಿ ಅಂಧ ಮಕ್ಕಳ ಶಾಲೆ (ಅಂಗವಿಕಲ ಮಕ್ಕಳ ಕ್ಷೇತ್ರ), ಡಾ.ಕೆ.ಎಸ್.ಪವಿತ್ರಾ – ಶಿವಮೊಗ್ಗ (ಮಕ್ಕಳ ಮನೋವಿಕಾಸ).
2023-24: ಪಂಡಿತ ರಾಮಕೃಷ್ಣಶಾಸ್ತ್ರಿ–ದಕ್ಷಿಣ ಕನ್ನಡ (ಮಕ್ಕಳ ಸಾಹಿತ್ಯ), ಬೆ.ಗೋ.ರಮೇಶ–ಮೈಸೂರು (ಮಕ್ಕಳ ಸಾಹಿತ್ಯ), ಅರುಣಾ ನರೇಂದ್ರ –ಕೊಪ್ಪಳ (ಮಕ್ಕಳ ಸಾಹಿತ್ಯ), ಮಾಲತೇಶ ಬಡಿಗೇರ– ಬೆಂಗಳೂರು (ರಂಗಭೂಮಿ), ಪ್ರತಾಪ ಆರ್.ಬಹುರೂಪಿ–ಧಾರವಾಡ (ಚಿತ್ರಕಲೆ), ಶಾಹೀನ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಟ್– ಬೀದರ್ (ಶಿಕ್ಷಣ), ನಾಗಸಿಂಹ ಜಿ.ರಾವ್ –ಬೆಂಗಳೂರು (ಮಕ್ಕಳ ಮನೋವಿಕಾಸ).
ಮಕ್ಕಳ ಚಂದಿರ ಪ್ರಶಸ್ತಿ (2022–23): ಕೊಳ್ಳೆಗಾಲ ಶರ್ಮಾ– ಮೈಸೂರು (ಕಥೆ), ಎಸ್.ಎಸ್. ಸಾತಿಹಾಳ –ವಿಜಯಪುರ (ಕವನ ಸಂಕಲನ), ಬೇಲೂರು ರಘುನಂದನ– ಬೆಂಗಳೂರು (ನಾಟಕ), ಹ.ಮ.ಪೂಜಾರ–ವಿಜಯಪುರ (ಕಾದಂಬರಿ), ಡಾ.ಕರವೀರಪ್ರಭು ಕ್ಯಾಲಕೊಂಡ– ಬಾಗಲಕೋಟೆ (ವೈಜ್ಞಾನಿಕ ಕೃತಿ)
2023–24: ನಿರ್ಮಲಾ ಸುರತ್ಕಲ್– ದಕ್ಷಿಣ ಕನ್ನಡ (ಕಥೆ), ಲಲಿತಾ ಪಾಟೀಲ– ಧಾರವಾಡ (ಕವನ ಸಂಕಲನ), ಮಾಲತೇಶ ಅಂಗೂರ– ಹಾವೇರಿ (ವೈಜ್ಞಾನಿಕ ಕೃತಿ), ನಾಗರಾಜ ಹುಡೇದ–ಹಾವೇರಿ (ಕಾದಂಬರಿ).
ಬಾಲಗೌರವ ಪ್ರಶಸ್ತಿ (2022–23): ಸಂಗೀತ– ಅಪೇಕ್ಷಾ ಎಸ್.ಎನ್.ಸರಕಿಲ್ (ರಾಯಚೂರು), ಪಂಚಮಿ ಬಿದನೂರ (ಮೈಸೂರು), ಅಥರ್ವ ಆರ್.ಘಂಟೆಣ್ಣವರ (ಧಾರವಾಡ).
ನೃತ್ಯ– ಸೃಷ್ಟಿ ಅಡಿಗ (ಬೀದರ್), ಸಿಂಚನಾ ಎಚ್.ಎಂ (ಹಾಸನ), ಶ್ರಿಯಾ ನರೇಂದ್ರ (ಬೆಂಗಳೂರು), ಶ್ರೇಯಾ ಪ್ರಲ್ಹಾದ ಕುಲಕರ್ಣಿ (ಬಾಗಲಕೋಟೆ),
ಕ್ರೀಡೆ: ಬಿ. ದಿಯಾ ಭೀಮಯ್ಯ (ಮಡಿಕೇರಿ), ಚಾರ್ವಿ ಎ. (ಹಾಸನ), ಕಾವ್ಯಾ ತುಕಾರಾಮ ದಾನ್ವೇನವರ (ಧಾರವಾಡ), ಬಸವಪ್ರಸಾದ ಜ. ಪಾಟೀಲ (ಕಲಬುರಗಿ),
ಚಿತ್ರಕಲೆ: ಧೃತಿ ಎಸ್. ( ಉಡುಪಿ), ಅಮೂಲ್ಯ ಮಠಪತಿ (ಕಲಬುರಗಿ), ಸುಖದಾ ಸತೀಶ ಮುರಗೋಡ (ಧಾರವಾಡ),
ಬಹುಮುಖ: ಮಯಾಂಕ ವಿ.ಹಿರೇನೂರ (ಉಡುಪಿ), ಧವನಿ ಎನ್ (ಬೆಂಗಳೂರು), ಎಂ.ವಿ.ಶ್ರೇಯಾ (ಉತ್ತರ ಕನ್ನಡ), ಅಭಿನವ ಕರಡಿ (ಬಾಗಲಕೋಟೆ)
ವಿಜ್ಞಾನ: ಲಿಖಿತ್ ಆರ್ (ಉಡುಪಿ), ಪ್ರಿಯಾಂಕಾ ಪುಂಡಲಿಕ ಪವಾರ (ವಿಜಯಪುರ), ಪ್ರಜ್ವಲ್ ಎನ್. ಹಲಾಳೆ(ಬೆಂಗಳೂರು)
2023-24: ಸಂಗೀತ– ಸ್ವಾತಿಕ ಗು. ಮಹಾಮನೆ (ಯಾದಗಿರಿ), ಅನುರಾಗ ನಾಯಕ್ (ಉಡುಪಿ), ಸಮರ್ಥ ಗೂಳಪ್ಪ ವಿಜಯನಗರ (ಬೆಳಗಾವಿ)
ನೃತ್ಯ– ವರ್ಷಿಣಿ ಪತ್ತಾರ (ಕಲಬುರಗಿ), ದಿವ್ಯಶ್ರೀ ಎಚ್.ಆರ್ (ಹಾಸನ), ಪೃಥ್ವಿ ಎಂ.ಹೆಗಡೆ (ವಿಜಯಪುರ), ಪಲ್ಲವಿ ಚಾಕಲಬ್ಬಿ (ಧಾರವಾಡ), ಪ್ರತಿಫಲಾ ಮೆಂಚ (ವಿಜಯಪುರ), ನಿಶಾಂತ ಹಿರೇಮಠ (ಧಾರವಾಡ), ರಚನಾ ಹಂಚಿನಮನಿ (ಧಾರವಾಡ).
ಕ್ರೀಡೆ– ಅನಿಕೇತ ಬಳ್ಳಾರಿ (ಕೊಪ್ಪಳ), ಸ್ನೇಹಾ ಎಚ್.ಕೊಟ್ಯಾನ್ (ಉಡುಪಿ),
ಗ್ಲೋರಿಯಾ ಮುರ್ತೋಟಿ (ಧಾರವಾಡ), ಸಮರ್ಥ ವಿ.ಕುಲಕರ್ಣಿ (ವಿಜಯಪುರ), ಜಾಹ್ನವಿ ಎಂ.ಆರ್. (ಬೆಂಗಳೂರು ಗ್ರಾಮಾಂತರ), ಜೋನ್ನಾ ಭಾಸ್ಕರ್ (ಧಾರವಾಡ)
ಬಹುಮುಖ– ಸಾಹಿತ್ಯ ಗೊಂಡಬಾಳ (ಕೊಪ್ಪಳ), ಸಾನಿಧ್ಯ ಆಚಾರ್ಯ (ಉಡುಪಿ), ಸಂಕೇತ ಹೊಳೆಆಲೂರ (ಧಾರವಾಡ), ಅನುಪ್ರಿಯಾ ಕುಲಕರ್ಣಿ (ವಿಜಯಪುರ), ಪೂನಂ ಜಾಧವ (ವಿಜಯಪುರ), ಸುಪ್ರಿಯಾ ಇಟಗಿ (ಗದಗ), ಭೈರವಿ ಎಂ. (ಬೆಂಗಳೂರು ಗ್ರಾಮಾಂತರ), ಶ್ರೀಲಕ್ಷ್ಮೀ ಭಟ್ (ಉತ್ತರ ಕನ್ನಡ).
ವಿಜ್ಞಾನ: ನಮ್ರತಾ ಸಿನ್ನೂರ (ಕೊಪ್ಪಳ), ಉದ್ಭವಿ ಶೆಟ್ಟಿ (ಉಡುಪಿ), ಭಾಗ್ಯಶ್ರೀ ಡೊಣಗಿ (ವಿಜಯಪುರ), ಖುಷಿ ಎಂ. (ದಾವಣಗೆರೆ).
ನಾಟಕ– ದಿಗಂತ ತುಂಬರಗುದ್ದಿ(ಧಾರವಾಡ),
ವಿಶೇಷ ಗೌರವ ಪ್ರಶಸ್ತಿ: (2022-23) ಪೂಜಾ ಭರಮಪ್ಪ ಹೊಂಬಳೇರ (ಹಾವೇರಿ), ರೇಷ್ಮಾ ನದಾಫ್ (ಗದಗ), ಸಾತವ್ವಾ ಸಿ ಹರಿಜನ್ (ಧಾರವಾಡ), ಸಿದ್ದಾರ್ಥ ಅಗ್ನಿ (ವಿಜಯಪುರ), ಗೌತಮ ವಿಶ್ವನಾಥ ಭಾವಿಕಟ್ಟಿ (ಬೆಳಗಾವಿ), ಅಂಬಿಕಾ (ಬಾಗಲಕೋಟೆ), ಭೀಮಾ ಎಸ್ (ದಾವಣಗೆರೆ), ರಂಗನಾಥ ಕೆ. (ತುಮಕೂರು), ಮಂಜುಶ್ರೀ ಟಿ. (ಚಿತ್ರದುರ್ಗ), ನಿಶ್ಚಲ್ ಸಾಯಿ (ಚಿಕ್ಕಬಳ್ಳಾಪುರ), ನಾಗವೇಣಿ (ಕೋಲಾರ), ಲಾವಣ್ಯ (ಶಿವಮೊಗ್ಗ), ಶಿವಕುಮಾರ ಎಚ್.ಆರ್ (ಕೊಡಗು), ಡೇವಿಡ್ (ಮೈಸೂರು), ಲಕ್ಷ್ಮೀ (ಚಿಕ್ಕಮಗಳೂರು), ಜಯಭೀಮರಾವ್ (ದಕ್ಷಿಣ ಕನ್ನಡ), ಸಾಗರ (ಉಡುಪಿ), ನಾಗು ಮಂ (ಹಾಸನ), ಸಂತೋಷ್ (ಮಂಡ್ಯ), ಜೀವನ್ (ಚಾಮರಾಜನಗರ), ಗಾಯತ್ರಿ (ಬೀದರ್), ಲಕ್ಷ್ಮೀ (ಯಾದಗಿರಿ), ಮೀನಾಕ್ಷಿ (ಬಳ್ಳಾರಿ), ಸಮೀಕ್ಷಾ (ಕಲಬುರಗಿ), ನಾಗವೇಣಿ (ರಾಯಚೂರು), ಕಿರಣ ಇಂಗಳೆ (ಕೊಪ್ಪಳ)।
2023-24: ದರ್ಶನ ಕುಂಟಗೌಡ್ರು(ಹಾವೇರಿ), ಸುದೀಪ ಉಪ್ಪಾರ (ಗದಗ), ಪರಶುರಾಮ ದೊಡ್ಡಮನಿ (ಉತ್ತರ ಕನ್ನಡ), ಮಹೇಶ ಚವಡಿ (ಧಾರವಾಡ), ಸಂಜನಾ ಪೂಜಾರಿ (ವಿಜಯಪುರ), ಕೃಷ್ಣಾ ಪೂಜಾರಿ (ಬೆಳಗಾವಿ), ಸಂಜೀವ ತೆಗ್ಗಿ(ಬಾಗಲಕೋಟೆ), ಲಕ್ಷ್ಮೀ ವೆಂಕಟಪ್ಪ (ದಾವಣಗೆರೆ), ಭಾಗ್ಯಲಕ್ಷ್ಮೀ ಬಸವರಾಜ(ತುಮಕೂರು), ಕಾವ್ಯಶ್ರೀ ಜಿ.ಜೆ(ಚಿತ್ರದುರ್ಗ), ಸಾಗರ ಬಿ.ಎಸ್ (ರಾಮನಗರ), ರಾಮಚರಣ (ಕೋಲಾರ), ಲಾವಣ್ಯ ಎಸ್(ಚಿಕ್ಕಬಳ್ಳಾಪುರ), ದಿವ್ಯಾ ಎನ್. ನಾಗರಾಜ (ಶಿವಮೊಗ್ಗ), ಚಂದನ್ ಪಿ.ಆರ್(ಕೊಡಗು), ಲಕ್ಷ್ಮೀ (ಮೈಸೂರು), ಸುಕನ್ಯಾ (ಚಿಕ್ಕಮಗಳೂರು), ಪ್ರತೀಕ್ಷಾ (ದಕ್ಷಿಣ ಕನ್ನಡ), ಸ್ವಪ್ನಾ (ಉಡುಪಿ), ಪ್ರವೀಣ ಜೆ.ಎನ್ (ಹಾಸನ)., ರೋಜಾ (ಮಂಡ್ಯ), ವಸಂತಿ (ಚಾಮರಾಜನಗರ), ಭಾಗ್ಯಲಕ್ಷ್ಮೀ (ಬೀದರ್), ಆಕಾಶ (ಯಾದಗಿರಿ), ನೇತ್ರಾವತಿ (ಬಳ್ಳಾರಿ), ಸುಜನ್ (ಕಲಬುರಗಿ), ಮೌನೇಶ (ರಾಯಚೂರು) ಹಾಗೂ ಶ್ರೀನಿವಾಸ ಬಿಸಲದಿನ್ನಿ (ಕೊಪ್ಪಳ).
ಧಾರವಾಡ: ‘ನಗರದ ಯಾಲಕ್ಕಿಶೆಟ್ಟರ ಬಡಾವಣೆಯಲ್ಲಿರು ಕರ್ನಾಟಕ ಬಾಲವಿಕಾಸ ಅಕಾಡೆಮಿ ಕಚೇರಿಯಲ್ಲಿ ಸ್ಟುಡಿಯೊ ನಿರ್ಮಿಸಲಾಗಿದೆ. ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು’ ಎಂದು ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘₹20 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಶಾಲಾ ಶಿಕ್ಷಣ ಇಲಾಖೆಯವರು ಶೈಕ್ಷಣಿಕ ಕಾರ್ಯಕ್ರಮಗಳಿಗೆ (ವಿಷಯ ತಜ್ಞರಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೋಧನೆ...) ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ದಾನಿಗಳ ನೆರವು ಪಡೆದು ಅಕಾಡೆಮಿಯಿಂದ ನಾಲ್ಕು ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಸ್ಫೂರ್ತಿ ಅಧ್ಯಯನ ಸಾಮಗ್ರಿ ಒದಗಿಸಲಾಗಿದೆ’ ಎಂದರು.
‘ಅಕಾಡೆಮಿಯಿಂದ ಕ್ರಿಯಾ ಯೋಜನೆ ಸಿದ್ದಪಡಿಸಿ ₹50 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ರಂಗ ತರಬೇತಿ, ಸಂವಹನ ಕೌಶಲ ತರಬೇತಿ, ಶಾಲೆ, ಪಿಯು ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ’ ಎಂದರು.
‘ಅಕಾಡೆಮಿಗೆ ದತ್ತಿ ನಿಧಿ ಪಡೆಯಲು ಅವಕಾಶ ಇದೆ. ದತ್ತಿ ನಿಧಿ ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು, ಬಡ್ಡಿಯಲ್ಲಿ ಬಡ ವಿದ್ಯಾರ್ಥಿಗಳ ಶಾಲೆ, ಕಾಲೇಜು ಶುಲ್ಕಕ್ಕೆ ಹಣ ಒದಗಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.
ಅಕಾಡೆಮಿ ಯೋಜನಾಧಿಕಾರಿ ಅಕ್ಕಮಹಾದೇವಿ, ವಿಶೇಷ ಕರ್ತವ್ಯ ಅಧಿಕಾರಿ ಅನ್ನಪೂರ್ಣಾ ಸಂಗಳದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.