ಹುಬ್ಬಳ್ಳಿ: ‘ಬೆಳಗಾವಿ, ಮೈಸೂರು, ಶಿವಮೊಗ್ಗ ಸೇರಿ ರಾಜ್ಯದ ಏಳು ನಗರಗಳಿಗೆ ತಲಾ 100ರಂತೆ ಮತ್ತು ಒಂದು ನಗರಕ್ಕೆ 50 ವಿದ್ಯುತ್ ಚಾಲಿತ (ಇವಿ) ಬಸ್‌ಗಳನ್ನು ಕೇಂದ್ರ ಸರ್ಕಾರ ಒದಗಿಸಲಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
‘ಕೇಂದ್ರ ಸರ್ಕಾರವೇ ನೇರವಾಗಿ ಟೆಂಡರ್ ಕರೆದು, ಚಾಲಕರನ್ನೂ ನೇಮಿಸಲಿದೆ. ಕಂಡಕ್ಟರ್‌ಗಳನ್ನು ನೇಮಿಸಿ, ಬಾಡಿಗೆ ಆಧಾರದಲ್ಲಿ ನಾವು ಬಸ್ ಬಳಸಬಹುದು’ ಎಂದು ಶುಕ್ರವಾರ ಇಲ್ಲಿ ತಿಳಿಸಿದರು.
‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಪ್ರಸಕ್ತ ವರ್ಷ 700 ಬಸ್ ನೀಡಲಾಗುತ್ತದೆ. 300 ಬಸ್‌ಗಳ ಖರೀದಿಗೆ ಈಗಾಗಲೇ ಟೆಂಡರ್ ಆಗಿದೆ’ ಎಂದು ಹೇಳಿದರು.
‘ಐದು ವರ್ಷ ಅವಧಿ ಪೂರ್ಣಗೊಳಿಸುವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪಕ್ಷದ ಹೈಕಮಾಂಡ್ ಗರಂ ಆಗಿದೆ ಎಂಬುದು ಊಹಾಪೋಹ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟದ್ದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.