ಧಾರವಾಡ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಜಿಲ್ಲೆ ಶೇ 67.62ರಷ್ಟು ಫಲಿತಾಂಶ ದಾಖಲಿಸಿದೆ. ರಾಜ್ಯದಲ್ಲಿ 18ನೇ ಸ್ಥಾನ ಪಡೆದಿದ್ದು, ಕಳೆದ ಬಾರಿಗಿಂತ ನಾಲ್ಕು ಸ್ಥಾನ ಜಿಗಿದಿದೆ. ಶ್ರೀರಕ್ಷಾ ಹಾವೇರಿ, ಶ್ರೇಯಾ ಪಿ. ಹೊಸೂರು ಹಾಗೂ ಅನುಶ್ರೀ ರಾಘವೇಂದ್ರ ಕಾತರಕಿ ಅವರು 625ಕ್ಕೆ 623 (ಶೇ 99.68) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕಳೆದ ಬಾರಿ ಶೇ 72.67 ಫಲಿತಾಂಶ ದಾಖಲಿಸಿ 22ನೇ ಸ್ಥಾನ ಪಡೆದಿತ್ತು. ಈ ಬಾರಿ 27,048 ವಿದ್ಯಾರ್ಥಿಗಳ ಪೈಕಿ 18,145 ಮಂದಿ ಪಾಸಾಗಿದ್ಧಾರೆ.
ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ಕೆಎನ್‌ಕೆ ಬಾಲಕಿಯರ ಶಾಲೆಯ ಶ್ರೀರಕ್ಷಾ ಹಾವೇರಿ ಅವರು ಸಂಸ್ಕೃತ (ಪ್ರಥಮ ಭಾಷೆ) 125, ಕನ್ನಡ, ಗಣಿತ, ಸಮಾಜವಿಜ್ಞಾನದಲ್ಲಿ ತಲಾ 100, ಇಂಗ್ಲಿಷ್ ಹಾಗೂ ವಿಜ್ಞಾನದಲ್ಲಿ ತಲಾ 99 ಸೇರಿದಂತೆ ಒಟ್ಟು 623 ಅಂಕ ಪಡೆದಿದ್ದಾರೆ. ಹೆಬ್ಬಳ್ಳಿಅಗಸಿ ಮಂಗಳವಾರ ಪೇಟೆಯವರಾದ ಇವರು, ರೈತ ಬಸವರಾಜ ಮತ್ತು ಸವಿತಾ ದಂಪತಿ ಪುತ್ರಿ.
ಕೆ.ಇ.ಬೋರ್ಡ್ ಇಂಗ್ಲಿಷ್ ಮಾಧ್ಯಮ ಶಾಲೆಯ ಅನುಶ್ರೀ ರಾಘವೇಂದ್ರ ಕಾತರಕಿ ಅವರು ಸಂಸ್ಕೃತ (ಪ್ರಥಮ ಭಾಷೆ) 125, ಕನ್ನಡ, ಗಣಿತ, ಸಮಾಜ ವಿಜ್ಞಾನದಲ್ಲಿ ತಲಾ 100, ಇಂಗ್ಲಿಷ್ ಹಾಗೂ ವಿಜ್ಞಾನದಲ್ಲಿ ತಲಾ 99 ಸೇರಿದಂತೆ ಒಟ್ಟು 623 ಅಂಕ ಪಡೆದಿದ್ದಾರೆ. ಇವರು ಸಪ್ತಾಪುರ ನಿವಾಸಿ, ಖಾಸಗಿ ಸಂಸ್ಥೆ ಉದ್ಯೋಗಿ ರಾಘವೇಂದ್ರ ಕಾತರಕಿ ಮತ್ತು ರಾಗಿಣಿ ದಂಪತಿಯ ಪುತ್ರಿ.
13,334 ಬಾಲಕರ ಪೈಕಿ 7,685 ಮಂದಿ (ಶೇ 57.63) ಹಾಗೂ 13,714 ಬಾಲಕಿಯರ ಪೈಕಿ 10,460 (ಶೇ 76.27) ಮಂದಿ ತೇರ್ಗಡೆಯಾಗಿದ್ಧಾರೆ. ಗ್ರಾಮೀಣ ಭಾಗದ 10,770 ವಿದ್ಯಾರ್ಥಿಗಳ ಪೈಕಿ 8,087 (ಶೇ 75.09) ಮಂದಿ, ನಗರದ ಪ್ರದೇಶದ 16,278 ವಿದ್ಯಾರ್ಥಿಗಳ ಪೈಕಿ 10,058 (ಶೇ 61.79) ಮಂದಿ ತೇರ್ಗಡೆಯಾದ್ದಾರೆ. ಈ ಬಾರಿಯೂ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ಹುಬ್ಬಳ್ಳಿ ಶೇ 76.82, ಧಾರವಾಡ ಶೇ 75.71, ಕಲಘಟಗಿ ಶೇ 75.32, ಕುಂದಗೋಳ ಶೇ 74.16, ನವಲಗುಂದ ಶೇ 69.41, ಧಾರವಾಡ ನಗರ ಶೇ 65.22 ಹಾಗೂ ಹುಬ್ಬಳ್ಳಿ ನಗರ ಶೇ 55.19 ಫಲಿತಾಂಶ ದಾಖಲಿಸಿದೆ.
ಶೇ 100 ಫಲಿತಾಂಶ: ಜಿಲ್ಲೆಯ ಒಟ್ಟು 444 ಶಾಲೆಗಳ ಪೈಕಿ 19 ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿವೆ. ಈ ಪೈಕಿ ಎಂಟು ಸರ್ಕಾರಿ ಶಾಲೆಗಳಿವೆ.
ಶೂನ್ಯ ಫಲಿತಾಂಶ: ಒಟ್ಟು ಆರು ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಈ ಪೈಕಿ ಹುಬ್ಬಳ್ಳಿ ನಗರ ಬ್ಲಾಕ್‌ನ 5 ಹಾಗೂ ನವಲಗುಂದ ತಾಲ್ಲೂಕಿನ ಒಂದು ಶಾಲೆ ಇವೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಜಿಲ್ಲೆಯಲ್ಲಿ ‘ಮಿಷನ್ ವಿದ್ಯಾಕಾಶಿ’ ಕಾರ್ಯಕ್ರಮ ಜಾರಿಗೊಳಿಸಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲಾಗಿತ್ತು. ರಾಜ್ಯ ಶ್ರೇಯಾಂಕ ಪಟ್ಟಿಯಲ್ಲಿ 10ರೊಳಗೆ ಸ್ಥಾನ ಪಡೆಯಲು ಗುರಿ ಇಟ್ಟುಕೊಳ್ಳಲಾಗಿತ್ತು. ಕಳೆದ ಬಾರಿಗಿಂತ ನಾಲ್ಕು ಸ್ಥಾನ ಮೇಲಕ್ಕೆ ಏರಿರುವುದೇ ಈ ಬಾರಿಯ ಸಾಧನೆಯಾಗಿದೆ.
Highlights - null
Quote -
Quote -
Cut-off box - ಜಿಲ್ಲೆಯಲ್ಲಿ ಹೆಚ್ಚು ಅಂಕ ಪಡೆದವರು ಹೆಸರು;ಅಂಕ;ಶಾಲೆ; ಶ್ರೀರಕ್ಷಾ ಹಾವೇರಿ;623;ಕೆಎನ್‌ಕೆ ಬಾಲಕಿಯರ ಶಾಲೆಧಾರವಾಡ; ಶ್ರೇಯಾ ಪಿ.ಹೊಸೂರು;623;ನಿರ್ಮಲಾ ಥಕ್ಕಾರ್ ಆಂಗ್ಲ ಮಾಧ್ಯಮ ಶಾಲೆಹುಬ್ಬಳ್ಳಿ; ಅನುಶ್ರೀ ರಾಘವೇಂದ್ರ ಕಾತರಕಿ;623;ಕೆ.ಇ.ಬೋರ್ಡ್ ಆಂಗ್ಲಮಾಧ್ಯಮಶಾಲೆ;ಧಾರವಾಡ; ಗೌತಮಿ ಕಾಶಿನಾಥ ಪಂಚಾಕ್ಷರಿ;622;ವಿದ್ಯಾರಣ್ಯ ಮಲ್ಟಿಪರ್ಪಸ್ ಶಾಲೆಧಾರವಾಡ; ದಿವ್ಯಾ ರಾಜೇಂದ್ರ ಮುತಾಲಿಕ್ ದೇಸಾಯಿ;622;ಮಲ್ಲಸಜ್ಜನ ಆಂಗ್ಲ ಮಾಧ್ಯಮ ಶಾಲೆಧಾರವಾಡ; ಶ್ರೇಯಾ ದೇವೇಂದ್ರ ರಪಾಟಿ;622; ಮೊರಾರ್ಜಿ ದೇಸಾಯಿ ಶಾಲೆ; ಹುಬ್ಬಳ್ಳಿ; ರಾಜೇಶ್ವರಿ ಮಂಜುನಾಥ ಹಡಪದ;622; ಆದರ್ಶ ವಿದ್ಯಾಲಯ; ಧಾರವಾಡ; ಶ್ರೇಯಾ ಬಸವರಾಜ ಕುರಿಯವರ್;621; ಮಲ್ಲಸಜ್ಜನ ಆಂಗ್ಲ ಮಾಧ್ಯಮ ಶಾಲೆಧಾರವಾಡ; ಶ್ರೇಯಾ ಬಸವರಾಜ ಶೀಲವಂತರ;620;ಕಾನ್ವೆಂಟ್ ಹೈಸ್ಕೂಲ್;ಹುಬ್ಬಳ್ಳಿ ಪ್ರತೀಕ್ಷಾ ಪುರೋಹಿತ;620;ಪ್ರೆಸೆಂಟೇಷನ್ ಬಾಲಕಿಯರ ಶಾಲೆ;ಧಾರವಾಡ; ಲಲಿತಾ ಕಲ್ಲಪ್ಪ ನೆಮ್ಮಣ್ಣವರ;620;;ಹನುಮಂತಪ್ಪ ಮಾವಲರ್ ಶಾಲೆ;ಮುಗದ ಅಮೋಘ ಜಾಯಕರ್;620;ನಿರ್ಮಲಾ ಥಕ್ಕಾರ್ ಆಂಗ್ಲ ಮಾಧ್ಯಮ ಶಾಲೆ ಹುಬ್ಬಳ್ಳಿ; ಶ್ರೀಲಕ್ಷ್ಮಿ ಆನಂದ ಕುಲಕರ್ಣಿ;620;ಕೆ.ಇ.ಬೋರ್ಡ್ ಆಂಗ್ಲಮಾಧ್ಯಮಶಾಲೆ;ಧಾರವಾಡ;
Cut-off box - ‘ನಿತ್ಯ 4 ಗಂಟೆ ಓದು’ ನಿರೀಕ್ಷಿಸಿದಷ್ಟು ಅಂಕ ಬಂದಿವೆ. ವಿಜ್ಞಾನ ಮತ್ತು ಗಣಿತಕ್ಕೆ ಟ್ಯೂಷನ್‌ಗೆ ಸೇರಿದ್ದೆ. ಪ್ರತಿದಿನ ನಾಲ್ಕು ಗಂಟೆ ಓದುತ್ತಿದ್ದೆ. ಶಾಲೆಯಲ್ಲಿ ಪಾಠಗಳನ್ನು ಚೆನ್ನಾಗಿ ಮನದಟ್ಟು ಮಾಡಿಸಿದ್ದರು. ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಜ್ಞಾನಿಯಾಗುವ ಗುರಿ ಇದೆ. ಅನುಶ್ರೀ ಕಾತರಕಿ 623 ಅಂಕ ಗಳಿಸಿದ ವಿದ್ಯಾರ್ಥಿನಿ ‘ಇನ್ನಷ್ಟು ಸುಧಾರಣೆಗೆ ಆದ್ಯತೆ’ ಧಾರವಾಡ ನಗರ ಮತ್ತು ಹುಬ್ಬಳ್ಳಿ ನಗರ ಬ್ಲಾಕ್‌ನಲ್ಲಿ ಫಲಿತಾಂಶ ಬಹಳ ಕಡಿಮೆಯಾಗಿದೆ. ಮಿಷನ್ ವಿದ್ಯಾಕಾಶಿ ಕಾರ್ಯಕ್ರಮದಿಂದ ಫಲಿತಾಂಶ ಸ್ವಲ್ಪ ಸುಧಾರಿಸಿದೆ. ಈ ವರ್ಷ ಫಲಿತಾಂಶ ಇನ್ನಷ್ಟು ಸುಧಾರಣೆಗೆ ಆದ್ಯ ಗಮನ ಹರಿಸಲಾಗುವುದು. ಎಸ್.ಎಸ್.ಕೆಳದಿಮಠ ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.