
ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿ: ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಅಂಗವಾಗಿ ನಗರದಲ್ಲಿರುವ ಚನ್ನಮ್ಮ ಪುತ್ಥಳಿಗೆ ಗುರುವಾರ ವಿವಿಧ ಸಂಘಟನೆಗಳಿಂದ ಮಾಲಾರ್ಪಣೆ ಮಾಡಲಾಯಿತು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್ ವತಿಯಿಂದ ನಗರದ ಗದಗ ರಸ್ತೆಯ ರೈಲ್ವೆ ಆವರಣದಲ್ಲಿರುವ ಚನ್ನಮ್ಮ ಪುತ್ಥಳಿಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತು.
ಸಾಹಸ, ಧರ್ಮಪಾಲನೆ, ದೇಶ ಸೇವೆಗೆ ಹೆಸರಾಗಿರುವ ಚನ್ನಮ್ಮನ ಆದರ್ಶವನ್ನು ಎಲ್ಲರೂ ಪಾಲಿಸಬೇಕೆಂದು ಮುಖಂಡರು ತಿಳಿಸಿದರು.
ಟ್ರಸ್ಟ್ ಕಾರ್ಯದರ್ಶಿ ನೀಲಕಂಠ ಅಸೂಟಿ ಅಧ್ಯಕ್ಷತೆ ವಹಿಸಿದ್ದರು. ನಂದಕುಮಾರ್ ಪಾಟೀಲ, ಮುಖಂಡ ಲಿಂಗರಾಜ್ ಕಂಬಳಿ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ಮೋಹನ ಲಿಂಬಿಕಾಯಿ, ಎಂ.ಎಸ್. ಅಕ್ಕಿ, ಟ್ರಸ್ಟ್‌ನ ರಾಷ್ಟ್ರೀಯ ಘಟಕದ ಕಾರ್ಯಾಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಉದ್ಯಮಿ ರಮೇಶ ಪಾಟೀಲ, ಲಕ್ಷ್ಮಿಕಾಂತ ಪಾಟೀಲ, ಜಗನಾಥಗೌಡ ಸಿದ್ಧನಗೌಡರ್, ಶರಣಪ್ಪ ಕೊಟಗಿ, ಕಾರ್ಮಿಕ ಮುಖಂಡ ಬಾಬಾಜಾನ ಮುಧೋಳ ಇದ್ದರು.
ಮಾಲಾರ್ಪಣೆ: ನಗರದ ಚನ್ನಮ್ಮ ವೃತ್ತದಲ್ಲಿರುವ ಕಿತ್ತೂರು ಚನ್ನಮ್ಮ ಪ್ರತಿಮೆಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ, ಬಸವ ಪರಿಸರ ಸಂರಕ್ಷಣಾ ಸಮಿತಿಯಿಂದ ಮಾಲಾರ್ಪಣೆ ಮಾಡಲಾಯಿತು. ಚನ್ನಮ್ಮನ ದೇಶಭಕ್ತಿಯನ್ನು ಶ್ಲಾಘಿಸಲಾಯಿತು.
ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರಮೇಶ ಪಾಟೀಲ, ಸದಾನಂದ ಡಂಗನವರ, ಉದ್ಯಮಿ ಲಕ್ಷ್ಮಿಕಾಂತ ಪಾಟೀಲ ಮಾತನಾಡಿದರು. ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಅಧ್ಯಕ್ಷ ಎಸ್.ಎಂ. ಸಾತ್ಮಾರ, ಸುರೇಶ ಡಿ. ಹೊರಕೇರಿ, ಸಾಹಿತಿ ಸುಭಾಷ ಚವ್ಹಾಣ, ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಅಂಗಡಿ, ಅನುಸೂಯಾ ಅರಕೇರಿ, ಸಿ.ಜಿ. ಧಾರವಾಡಶೆಟ್ಟರ, ಪ್ರಮೋದ ಬದ್ದಿ, ರವಿ ಬಡ್ನಿ, ನವೀನ ಇದ್ದರು.
ನೈರುತ್ಯ ರೈಲ್ವೆ: ಪ್ರಧಾನ ಕಚೇರಿ ರೈಲ್‌ಸೌಧದಲ್ಲಿ ನಡೆದ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ನೈರುತ್ಯ ರೈಲ್ವೆಯ ಮಹಾ ಪ್ರಬಂಧಕ ಮುಕುಲ್ ಶರಣ್ ಮಾಥುರ್ ಅವರು ಚನ್ನಮ್ಮ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
‘ನಾಡಿನ ರಕ್ಷಣೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ಚನ್ನಮ್ಮನ ಶಕ್ತಿ ಮತ್ತು ಶೌರ್ಯ ಸ್ಮರಣೀಯ. ಅವರ ಧೈರ್ಯ, ಆತ್ಮಾಭಿಮಾನ ಹಾಗೂ ದೇಶಭಕ್ತಿ ಆದರ್ಶನೀಯ’ ಎಂದರು.
ಹೆಚ್ಚುವರಿ ಮಹಾಪ್ರಬಂಧಕ ಪಿ. ಅನಂತ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಬಿಜೆಪಿ: ಪಕ್ಷದ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಘಟಕದಿಂದ ಚನ್ನಮ್ಮ ಜಯಂತಿ ಆಚರಿಸಲಾಯಿತು. ಘಟಕದ ಅಧ್ಯಕ್ಷ ರಾಜು ಕಾಳೆ, ಸೀಮಾ ಲದ್ವಾ, ಶಶಿಶೇಖರ ಡಂಗನವರ, ಎಂ.ಡಿ. ಮೆಣಸಿನಕಾಯಿ, ಅಕ್ಕಮ್ಮ ಹೆಗಡೆ, ಲಿಂಗರಾಜ ಬೆಳಗಟ್ಟಿ, ಮುತ್ತು ಹೆಬ್ಬಳ್ಳಿ, ಮಂಜುನಾಥ ಕೊಂಡಪಲ್ಲಿ, ರಾಘು ಪವಾರ, ಅಶೋಕ ಬೀಳಗಿ, ಪ್ರವೀಣ ಬಳಗಲಿ, ಮಂಜುನಾಥ ಉಟವಾಲೆ ಇದ್ದರು.
ಚುಸಾಪ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಚಿಂತನ ವೇದಿಕೆಯಿಂದ ಉಣಕಲ್‌ನ ಪುಸ್ತಕ ದಾಸೋಹದಲ್ಲಿ ಗುರುವಾರ ಚನ್ನಮ್ಮ ಜಯಂತಿ ಕಾರ್ಯಕ್ರಮ ನಡೆಯಿತು.
ಪರಿಷತ್ತಿನ ಕೃಷ್ಣಮೂರ್ತಿ ಕುಲಕರ್ಣಿ ಮಾತನಾಡಿ, ‘ಕಿತ್ತೂರು ರಾಣಿ ಚನ್ನಮ್ಮ ಅವರ ಹೆಸರು ಜನಮಾನಸದಲ್ಲಿ ಸ್ಥಿರವಾಗಿ ಉಳಿಯುವಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು. ಪರಿಷತ್ತಿನಿಂದ ಸಾಹಿತ್ಯಾಸಕ್ತ ಸ್ವಾತಂತ್ರ್ಯ ಹೋರಾಟಗಾರರ ಸಮಾವೇಶ ಏರ್ಪಡಿಸಲಾಗುತ್ತದೆ’ ಎಂದು ಹೇಳಿದರು.
ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಅಧ್ಯಕ್ಷತೆ ವಹಿಸಿದ್ದರು. ವೆಂಕಟೇಶ ಪೂಜಾರ, ಷಣ್ಮುಖ ಪಾಟೀಲ, ವಿ.ಎಸ್. ರಮೇಶ, ಗಣೇಶ ಇದ್ದರು.
Cut-off box - ಮಹನೀಯರ ಸ್ಮರಿಸಲು ಸಲಹೆ ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವತಿಯಿಂದ ಗದಗ ರಸ್ತೆಯ ಎರಡನೇ ಪ್ರವೇಶ ದ್ವಾರದಲ್ಲಿನ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು. ವಿಭಾಗೀಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕ ಪ್ರೇಮ್‌ಚಂದ್ರ ಮಾತನಾಡಿ ‘ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ಚನ್ನಮ್ಮನ ಶೌರ್ಯ ಸಾಹಸ ಎಲ್ಲರಿಗೂ ಸ್ಫೂರ್ತಿಯಾಗಿದೆ. ದೇಶದ ಮಹಾನ್ ವ್ಯಕ್ತಿಗಳ ಸ್ಮರಣೆ ಮಾಡುವುದು ಎಲ್ಲರ ಕರ್ತವ್ಯ’ ಎಂದರು. ವಿಭಾಗೀಯ ರೈಲ್ವೆ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಕಾರ್ತಿಕ್ ವಿ. ಹೆಗಡೆಕಟ್ಟಿ ಮಾತನಾಡಿ ‘ರಾಣಿ ಚನ್ನಮ್ಮ ಶೌರ್ಯದ ಸಂಕೇತ. ಅವರ ಬದುಕಿನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.