ADVERTISEMENT

ಮಹಿಳಾ ಕ್ರಿಕೆಟ್‌: ಹುಬ್ಬಳ್ಳಿಯಲ್ಲಿ ಆಯ್ಕೆ ಪ್ರಕ್ರಿಯೆ ಜ. 4ಕ್ಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 4:49 IST
Last Updated 2 ಜನವರಿ 2026, 4:49 IST
<div class="paragraphs"><p>ಭಾರತ ಮಹಿಳಾ ಕ್ರಿಕೆಟ್‌ ತಂಡ</p></div>

ಭಾರತ ಮಹಿಳಾ ಕ್ರಿಕೆಟ್‌ ತಂಡ

   

ಕೃಪೆ: ಪಿಟಿಐ

ಹುಬ್ಬಳ್ಳಿ: ಮಹಿಳಾ ಸೀನಿಯರ್‌ ವಿಭಾಗದ ಆಯ್ಕೆ ಪಂದ್ಯಗಳಿಗಾಗಿ ಮುಕ್ತ ಆಯ್ಕೆ ಪ್ರಕ್ರಿಯೆಯು ಜನವರಿ 4ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)–ಬಿ ಮೈದಾನದಲ್ಲಿ ನಡೆಯಲಿದೆ.

ADVERTISEMENT

ಆಸಕ್ತರು ಕೆಎಸ್‌ಸಿಎ ಪ್ರಾದೇಶಿಕ ನಿಮಂತ್ರಕರಿಗೆ ಮಾಹಿತಿ ನೀಡಬೇಕು. ಆಯ್ಕೆ ಪ್ರಕ್ರಿಯೆ ನಡೆಯುವ ದಿನದಂದು ಬೆಳಿಗ್ಗೆ 8 ಗಂಟೆಗೆ, ಕ್ರಿಕೆಟ್‌ ದಿರಿಸು ಹಾಗೂ ಜನನ ಪ್ರಮಾಣಪತ್ರದ ಪ್ರತಿಯೊಂದಿಗೆ ಹಾಜರಾಗಬೇಕು.

2009ರ ಆಗಸ್ಟ್‌ 31ರಂದು ಹಾಗೂ ಅದಕ್ಕೂ ಮುನ್ನ ಜನಿಸಿದವರು ಭಾಗವಹಿಸಬೇಕು. 16 ವರ್ಷದೊಳಗಿನವರಿಗೆ ಅವಕಾಶವಿಲ್ಲ ಎಂದು ಕೆಎಸ್‌ಸಿಎ ಧಾರವಾಡ ಪ್ರಾದೇಶಿಕ ನಿಮಂತ್ರಕ ವೀರಣ್ಣ ಸವಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.