ADVERTISEMENT

ಕುಂದಗೋಳ | ಹಡಪದ ಅಪ್ಪಣ್ಣ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 5:06 IST
Last Updated 19 ಜುಲೈ 2025, 5:06 IST
ಕುಂದಗೋಳ ಮತಕ್ಷೇತ್ರದ ಬು. ಅರಳಿಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಮಾತನಾಡಿದರು 
ಕುಂದಗೋಳ ಮತಕ್ಷೇತ್ರದ ಬು. ಅರಳಿಕಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಮಾತನಾಡಿದರು    

ಕುಂದಗೋಳ: ‘ವಚನ ಸಾಹಿತ್ಯದ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಹಡಪದ ಅಪ್ಪಣ್ಣನವರು, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು’ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಹೇಳಿದರು.

ಕುಂದಗೋಳ ಮತಕ್ಷೇತ್ರದ ಬು.ಅರಳಿಕಟ್ಟಿ ಗ್ರಾಮದಲ್ಲಿ ಹಡಪದ ಸಮಾಜದಿಂದ ಈಚೆಗೆ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು.

ಕುಂದಗೋಳ ಹಾಗೂ ಹುಬ್ಬಳ್ಳಿ ತಾಲ್ಲೂಕು ಹಡಪದ ಅಪ್ಪಣ್ಣ ಸಮಾಜದವರು ಹಮ್ಮಿಕೊಳ್ಳುವ ಕಾರ್ಯಕ್ರಮಕ್ಕಾಗಿ ಪ್ರತಿ ವರ್ಷ ಮಾಜಿ ಸಚಿವ ದಿ. ಸಿ.ಎಸ್. ಶಿವಳ್ಳಿ ಅವರ ಹೆಸರಿನಲ್ಲಿ ತಲಾ ₹50 ಸಾವಿರ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಮಾಜಿ ಶಾಸಕ ಎಂ.ಎಸ್. ಅಕ್ಕಿ ಮಾತನಾಡಿದರು. ತಿರಮಲಕೊಪ್ಪದ ದಾನಯ್ಯ ದೇವರು ಸಾನ್ನೊಧ್ಯ ವಹಿಸಿದ್ದರು. ಅಂಧಾನಿಮಠದ ಚನ್ನಯ್ಯನವರು ಹಾಗೂ ಪಂಚಾಕ್ಷರಯ್ಯ ಹೊಸಮಠ ಆಶೀರ್ವಚನ ನೀಡಿದರು. ಮಾರುತಿ ಹಡಪದ, ಲೋಚನಪ್ಪ ಹಡಪದ, ನಿಂಗಪ್ಪ ಹಡಪದ, ಫಕ್ಕಿರಪ್ಪ ಮೂಲಿಮನಿ, ಪ್ರಕಾಶ ಹೊಸಮನಿ, ಸಿದ್ದಪ್ಪ ಹುಬ್ಬಳ್ಳಿ, ಸಿದ್ದಪ್ಪ ನವಲಗುಂದ, ಮುರಗೇಪ್ಪ ಹಡಪದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.