ಕುಂದಗೋಳ: ತಾಲ್ಲೂಕಿನ ಸಂಶಿ ಗ್ರಾಮದಲ್ಲಿ ನಿತ್ಯ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ನೊಂದ ಮಹಿಳೆಯರು ಮಂಗಳವಾರ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಹಶೀಲ್ದಾರ ರಾಜು ಮಾವರಕರ ಹತ್ತಿರ ತಮಗೆ ಆಗುತ್ತಿರುವ ತೊಂದರೆಯನ್ನು ಕಣ್ಡೀರು ಹಾಕುತ್ತ ಹೇಳಿದ ಘಟನೆ ಜರುಗಿತು.
‘ನೊಂದ ಮಹಿಳೆ ಅವರಿಗೆ ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ಇದೆ. ಕುಟುಂಬ ನಡೆಸುವುದರಲ್ಬೇ ಹೈರಾಣಾಗುತ್ತಿರುವ ನಾನೂ ನಿತ್ಯ ಈ ಹಣಕಾಸಿನ ಅವರ ಉಪಟಳಕ್ಕೆ ಸಾಕಷ್ಟು ಭಾರಿ ಸಾವಿಗೆ ತೆಲೆಯೊಡ್ಡುವ ಮನಸ್ಥಿತಿ ಬಂದಿದೆ. ಫೈನಾನ್ನ್ ಅವರಿಗೆ ಪ್ರತಿ ತಿಂಗಳು ಯಾವುದೇ ಕಂತು ಬಾಕಿ ಇಲ್ಲದೇ ಕಟ್ಟುತ್ತಾ ಬಂದಿರುತ್ತೇನೆ. ಅದರೆ ಈ ಜುಲೈ ತಿಂಗಳದ ಕಂತನ್ನು ಕಟ್ಟಲು ಆಗಿರುವುದಿಲ್ಲ, ವಸೂಲಿ ಸಿಬ್ಬಂದಿಯವರಿಗೆ ಇದನ್ನು ಹೇಳಿದರೆ ಸಾರ್ವಜನಿಕ ಸ್ಥಳಗಳಲ್ಲಿ ತುಚ್ಯವಾಗಿ ಮಾತನಾಡಿ ಮರ್ಯದೆ ತೆಗೆಯುತ್ತಿದ್ದಾರೆ’ ಎಂದು ನೊಂದ ಮಹಿಳೆಯ ಪತಿ ಅಲವತ್ತುಕೊಂಡಿದ್ದರೆ.
ಈಗಾಗಲೆ ನನ್ನ ಮತ್ತು ನನ್ನ ಮಗಳ ಮಾಂಗಲ್ಯ, ಆಭರಣ, ಮನೆಯನ್ನು ಗಿರವಿ ಇಟ್ಟು ಕಟ್ಟಿರುತ್ತೇನೆ. ಇವರಿಂದ ದಿನೇದಿನೇ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ನಮಗೆ ಸಮಯ ನೀಡಿ ಕಟ್ಟುತ್ತೇವೆ ಎಂದು ಮನವಿ ಮಾಡಿದರು.
ನೀಲವ್ವ ನೀರಲಗಿ ಮಾತನಾಡಿ, ‘ಪಂಚಮಿ ಹಬ್ಬ ಮಾಡಾಕ ಬಿಡವಲ್ಲರೀ ಇವ್ರು ಇವತ್ ಬೆಳಿಗ್ಗೆ 8ಕ್ಕೆ ಬಂದು ಹಬ್ಬ ಮಾಡರೀ ಬಿಡ್ರೀ ಕಂತು ಕಟ್ರಿ, ಸತ್ರ ಸಾಯೀರಿ ಕಟ್ಟಿ ಸಾಯೀರಿ ಅಂತ ಹೇಳತಾರ್ರಿ, ಜಿಟಿಜಿಟಿ ಮಳೆ ಬೇರೆ ಹಿಡಿತೈತಿ ಹೊಲದಾಗ ಕೆಲಸನೂ ಇಲ್ಲಾ ಏನಿಲ್ಲಾ ನಾವೂ ಕಟ್ಟೋದಾದ್ರ ಹೇಂಗ ರೀ’ ಎಂದು ತಮ್ಮ ಅಳಲನ್ನು ತೋಡಿಕೊಂಡರು.
‘ಇವರ ಕಾಟಕ್ಕೆ ಪಂಚಮಿ ಹಬ್ಬ ಮಾಡದೆ ಬಂದೆವ್ರಿ, ಒಂದು ತಿಂಗಳ ಕಂತನ್ನು ಕಟ್ಟದಿದ್ದಕ್ಕಾಗಿ ರಾತ್ರಿ 9 ಗಂಟೆ ವರೆಗೆ ಮನೆಯಂಗಳದಲ್ಲಿ ಬಂದು ಬಾಯಿ ಮಾಡತಾ ಇದ್ದಾರೆ’ ಎಂದು ಮಹಿಳೆಯರು ತಿಳಿಸಿದರು.
ಸಮಸ್ಯಗೆ ಸ್ಪಂದಿಸಿದ ತಹಶೀಲ್ದಾರ್ ರಾಜು ಮಾವರಕರ ಮಾತನಾಡಿ, ಮೈಕ್ರೋ ಫೈನಾನ್ಸ್ ಸಿಬ್ಬಂದಿಗೆ ಕರೆ ಮಾಡಿ ಎಚ್ಚರಿಕೆ ನೀಡಿದರು. ಅಲ್ಲದೆ ನೋಟಿಸ್ ಕೂಡಾ ನೀಡುವುದಾಗಿ ಹೇಳಿ ಮಹಿಳೆಯರಿಗೆ ಧೈರ್ಯ ತುಂಬಿದರು.
ಜಯವ್ವ ಕರೆಣ್ಣನವರ, ನೀಲಮ್ಮ ಸೂಲದ, ಉಡಚವ್ಲ ಕೊಂಚಗಿರಿ, ನೀಲಮ್ಮ ನೀರಲಗಿ, ಪಾರ್ವತಿ, ಆಶಾ ಬಾರಕೇರ, ಲಲಿತಾ ಸುಣಗಾರ, ರಮೇಶ ಸುಣಗಾರ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.