ಹುಬ್ಬಳ್ಳಿ: ‘ಬಂಜಾರ ಸಮಾಜದವರ ಮೂಲ, ಭಾಷೆಯ ಕುರಿತು ಸಂಶೋಧನೆ ನಡೆಯಬೇಕು. ಮೂಢನಂಬಿಕೆಯಿಂದ ಸಮಾಜದಲ್ಲಿ ಆಗುತ್ತಿರುವ ಅನೇಕ ತಪ್ಪುಗಳು ನಿವಾರಣೆ ಆಗಬೇಕು’ ಎಂದು ಸಾಹಿತಿ ಬಿ.ಟಿ.ಲಲಿತಾ ನಾಯಕ್ ತಿಳಿಸಿದರು.
ಇಲ್ಲಿ ಶನಿವಾರ ಬಂಜಾರ ಭವನದಲ್ಲಿ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಂಜಾರ ಸಮಾಜದವರು ಹೊಸ ಕಾಲಘಟಕ್ಕೆ ತಕ್ಕಂತೆ ಜೀವನಶೈಲಿ ರೂಢಿಸಿಕೊಳ್ಳಬೇಕು. ಸುಧಾರಣೆ ಕಂಡುಕೊಳ್ಳಲು ಸಾಹಿತ್ಯದ ಮೂಲಕ ಅವಲೋಕನ ಮಾಡಬೇಕು’ ಎಂದರು.
ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ್ ಮಾತನಾಡಿ, ‘ಹುಬ್ಬಳ್ಳಿಯಲ್ಲಿ ಪರಿಷತ್ತಿನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ನಿವೇಶನ ನೀಡಬೇಕು. ಬಂಜಾರರ ಬದುಕಿನ ಸುಧಾರಣೆಗೆ ಆದ್ಯತೆ ನೀಡಬೇಕು’ ಎಂದರು.
ಸಚಿವ ಸಂತೋಷ್ ಲಾಡ್ ಪರಿಷತ್ತಿನ ಲಾಂಛನ ಬಿಡುಗಡೆ ಮಾಡಿದರು. ಪರಿಷತ್ತಿನ ಅಧ್ಯಕ್ಷ ಶ್ರೀಕಾಂತ ಆರ್.ಜಾಧವ, ಗೌರವಾಧ್ಯಕ್ಷ ಪ್ರೊ.ಪಿ.ಕೆ.ಖಂಡೋಬಾ, ಕಾರ್ಯಾಧ್ಯಕ್ಷ ಎಲ್.ಮಧುನಾಯ್ಕ ಮಾತನಾಡಿದರು.
ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಕರ್ನಾಟಕ ತಾಂಡಾ ಅಭಿ ವೃದ್ಧಿ ನಿಗಮದ ಅಧ್ಯಕ್ಷ ಎನ್.ಜಯದೇವ ನಾಯ್ಕ್, ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಿ.ಬಿ.ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.