ಹುಬ್ಬಳ್ಳಿ: ‘ಶಾಸನಸಭೆಗಳ ವ್ಯವಸ್ಥಿತ ಸಬಲೀಕರಣದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಂಡು ನಾಗರಿಕರ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ವಿಧಾನ ಪರಿಷತ್ ಸಹೇಳಿದರು.
ಕೆರೆಬಿಯನ್ ಪೂರ್ವ ದ್ವೀಪ ರಾಷ್ಟ್ರ ಬಾಬ್ರ್ಡೋಸ್ ದೇಶದ ರಾಜಧಾನಿ ಬ್ರಿಜ್ಡ್ಟೌನ್ ನಗರದಲ್ಲಿ ಹಮ್ಮಿಕೊಂಡಿರುವ 68ನೇ ಕಾಮನ್‍ವೆಲ್ತ್ ಸಂಸದೀಯ ಸಮಾವೇಶದ ವಿಚಾರಗೋಷ್ಠಿಯಲ್ಲಿ ‘ಪ್ರಜಾಪ್ರಭುತ್ವದ ಯಶಸ್ಸಿಗೆ ಶಾಸನ ಸಭೆಗಳ ಸಬಲೀಕರಣದ ಅಗತ್ಯತೆ’ ಕುರಿತು ಮಾತನಾಡಿದರು.
‘ಶಾಸನ ಸಭೆಗಳ ಹಾಗೂ ಜನಪ್ರತಿನಿಧಿಗಳ ಕ್ರೀಯಾಶೀಲತೆ, ಅಭಿವೃದ್ದಿ ಪರ ಚಿಂತನೆಯಿಂದ ರಾಷ್ಟ್ರದ ಭವಿಷ್ಯ ಉಜ್ವಲವಾಗಲಿದೆ. ಪ್ರಜಾಪ್ರಭುತ್ವದ ಮೂಲತತ್ವಗಳನ್ನು ಸಂಸತ್ತು, ವಿಧಾನಸಭೆ, ವಿಧಾನ ಪರಿಷತ್ ಅನುಷ್ಠಾನಗೊಳಿಸುತ್ತವೆ. ಹಾಗಾಗಿ, ಜನರ ಸಂಕಷ್ಟ ನಿವಾರಣೆಗೆ ಅಲ್ಲಿ ಅಗತ್ಯ ಚಿಂತನೆ ನಡೆದರೆ ಪ್ರಜಾಪ್ರಭುತ್ವದ ನೈಜ ಆಶಯ ಈಡೇರುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಸಾರ್ವಜನಿಕರ ಕ್ರಿಯಾಶೀಲ ಪಾಲ್ಗೊಳ್ಳುವಿಕೆಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಆರ್ಥಪೂರ್ಣವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ಹೊಣೆಗಾರಿಕೆ ಅರಿತಾಗ ಪ್ರಜಾಪ್ರಭುತ್ವದ ಬೇರುಗಳು ಬಲಗೊಳ್ಳುತ್ತವೆ. ನಾಗರಿಕರು, ಹಕ್ಕುಗಳ ಪ್ರತಿಪಾದನೆಯೊಂದಿಗೆ ಕರ್ತವ್ಯಗಳನ್ನು ಸಮರ್ಥವಾಗಿ ನಿಭಾಯಿಸಬೇಕು’ ಎಂದು ಸಲಹೆ ನೀಡಿದರು.
‘ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಜನರ ಮತಗಳಿಂದ ಪ್ರತಿನಿಧಿಯ ಆಯ್ಕೆ ಮಾಡುವ ಅವಕಾಶವನ್ನು ಪ್ರಜಾಪ್ರಭುತ್ವ ಕಲ್ಪಿಸಿಕೊಟ್ಟಿದೆ. ಎಲ್ಲ ಜನಪ್ರತಿನಿಧಿಗಳು ಆಧುನಿಕ ಸಂವಹನ ತಂತ್ರಗಾರಿಕೆ ಅಳವಡಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಗೆ ಕಟಿಬದ್ದರಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.