ADVERTISEMENT

ಹುಬ್ಬಳ್ಳಿ: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 15:46 IST
Last Updated 14 ಆಗಸ್ಟ್ 2024, 15:46 IST
ಒಳಮೀಸಲಾತಿ ವರ್ಗೀಕರಣ ಶೀಘ್ರ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಪರಿಶಿಷ್ಟ ಜಾತಿಗಳ ಸಾಮರಸ್ಯ ಐಕ್ಯತಾ ಒಕ್ಕೂಟದಿಂದ ಬುಧವಾರ ಮೆರವಣಿಗೆ ನಡೆಯಿತು
ಒಳಮೀಸಲಾತಿ ವರ್ಗೀಕರಣ ಶೀಘ್ರ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಪರಿಶಿಷ್ಟ ಜಾತಿಗಳ ಸಾಮರಸ್ಯ ಐಕ್ಯತಾ ಒಕ್ಕೂಟದಿಂದ ಬುಧವಾರ ಮೆರವಣಿಗೆ ನಡೆಯಿತು   

ಹುಬ್ಬಳ್ಳಿ: ಸುಪ್ರೀಂಕೋರ್ಟ್ ತೀರ್ಪಿನಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣ ಶೀಘ್ರ ಜಾರಿಗೆ ಆಗ್ರಹಿಸಿ ಪರಿಶಿಷ್ಟ ಜಾತಿಗಳ ಸಾಮರಸ್ಯ ಐಕ್ಯತಾ ಒಕ್ಕೂಟದ ವತಿಯಿಂದ ನಗರದಲ್ಲಿ ಬುಧವಾರ ಮೆರವಣಿಗೆ ನಡೆಸಲಾಯಿತು.

ಇಂದಿರಾ ಗಾಜಿನಮನೆಯಲ್ಲಿರುವ ಬಾಬು ಜಗಜೀವನ್‌ ರಾಮ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮುಖಂಡರು ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಅಂಬೇಡ್ಕರ್‌ ವೃತ್ತದವರೆಗೆ ಸಾಗಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಒಳಮೀಸಲಾತಿ ಹೋರಾಟದಲ್ಲಿ ಬಲಿದಾನ ಮಾಡಿದವರಿಗೆ ನಮಿಸಲಾಯಿತು.

ಮಿನಿವಿಧಾನಸೌಧದಲ್ಲಿ ತಹಶೀಲ್ದಾರ್‌ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿ, ಒಳಮೀಸಲಾತಿ ವರ್ಗೀಕರಣ ಜಾರಿ ಬಳಿಕವೇ ನೇಮಕಾತಿ, ಮುಂಬಡ್ತಿ ಮುಂದುವರಿಸಬೇಕು ಹಾಗೂ ಡೋಹರ ಸಮುದಾಯವನ್ನು ಮರಳಿ ಪರಿಶಿಷ್ಟ ಸಮುದಾಯಕ್ಕೆ ಸೇರ್ಪಡೆ ಮಾಡಬೇಕೆಂದು ಆಗ್ರಹಿಸಲಾಯಿತು.

ADVERTISEMENT

ಸಂಚಾಲಕ ವಿಜಯ ಗುಂಟ್ರಾಳ, ಬಸಪ್ಪ ಮಾದರ, ವೀರಭದ್ರಪ್ಪ ಹಾಲಹರವಿ, ಸುರೇಶ ಕಣಮಕ್ಕಲ, ರವಿ ಕಲ್ಯಾಣಿ, ಸಹದೇವ ಮಾಳಗಿ, ಮಂಜುನಾಥ ಸಣ್ಣಕಿ, ಭೀಮು ಹಲಗಿ, ಶಂಕರ ಅಜಮನಿ, ಮೇಘರಾಜ್ ಹಿರೇಮನಿ, ಬಸವರಾಜ ನಾರಾಯಣಕಾರ, ಸಂತೋಷ ಚಲವಾದಿ, ರವೀಂದ್ರ ಇಟ್ಟಿಗಾರ, ಇಂದೂಮತಿ ಶಿರಗಾವಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.