ADVERTISEMENT

‘ಗೌನ್ ಬಳಕೆ ಕೈಬಿಡಲು ಮನವಿ’

ಗೌನ್ ಧರಿಸದೆ ಸಿ.ಎಂ ಸ್ವಾಗತಿಸಿ ಸಂಪ್ರದಾಯ ಮುರಿದ ಮೇಯರ್

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 5:02 IST
Last Updated 5 ಸೆಪ್ಟೆಂಬರ್ 2022, 5:02 IST

ಹುಬ್ಬಳ್ಳಿ: ಮಹಾನಗರ ಪಾಲಿಕೆಗಳ ಮೇಯರ್‌ಗಳು ಶಿಷ್ಟಾಚಾರದ ಭಾಗವಾಗಿ ಧರಿಸುವ ಬ್ರಿಟಿಷ್ ಸಂಪ್ರದಾಯದ ಗೌನ್‌ಗಳ ಬದಲಿಗೆ, ದೇಶೀಯ ಸಂಸ್ಕೃತಿಯನ್ನು ಬಿಂಬಿಸುವ ಪೋಷಾಕು ಬಳಸುವುದನ್ನು ಜಾರಿಗೆ ತರಬೇಕು ಎಂದು ಮೇಯರ್ ಈರೇಶ ಅಂಚಟಗೇರಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಈ ಕುರಿತ ಪತ್ರವನ್ನು ಮುಖ್ಯಮಂತ್ರಿಗೆ ಭಾನುವಾರ ಸಲ್ಲಿಸಿ, ‘ಬ್ರಿಟಿಷರ ದಾಸ್ಯದಿಂದ ದೇಶ ಬಿಡುಗಡೆಗೊಂಡು 75 ವರ್ಷಗಳಾದರೂ, ಆಗಿನ ಕಾಲದ ಉಡುಗೆ–ತೊಡುಗೆಗಳನ್ನು ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ. ಸ್ವಾತಂತ್ರ್ಯ ನಂತರವೂ ಇವುಗಳನ್ನು ಬಳಸುವುದರಲ್ಲಿ ಯಾವುದೇ ಅರ್ಥವಿಲ್ಲ’ ಎಂದು ಗಮನ ಸೆಳೆದಿದ್ದಾರೆ.

‘ಮೈಸೂರು ಮಹಾರಾಜರು ವಿಶಿಷ್ಟ ಕಾರ್ಯಕ್ರಮಗಳಲ್ಲಿ ಧರಿಸುತ್ತಿದ್ದ ದೇಶೀಯ ಪೋಷಾಕನ್ನು ಧರಿಸುವುದರಿಂದ, ಸ್ವದೇಶಿ ಮಾದರಿಗೆ ಚಾಲನೆ ಕೊಟ್ಟಂತಾಗುತ್ತದೆ’ ಎಂದರು.

ADVERTISEMENT

ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರದ ಗೌನ್ ಧರಿಸದೆ ಮುಖ್ಯಮಂತ್ರಿಯನ್ನು ಸ್ವಾಗತಿಸಿದ ಮೇಯರ್, ಹಿಂದಿನಿಂದ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯವನ್ನು ಮುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.