ADVERTISEMENT

ಪುರುಷರ ಬ್ಯೂಟಿ ಪ್ಯಾಜೆಂಟ್: ರಾಜೀವ ಪವಾರ ದ್ವಿತೀಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 9:40 IST
Last Updated 27 ನವೆಂಬರ್ 2019, 9:40 IST
ಟ್ರೋಫಿಯೊಂದಿಗೆ ರಾಜೀವ್ ಪವಾರ (ಬಲದಿಂದ ಮೊದಲನೆಯವರು). ತರಬೇತುದಾರರಾದ ಮಯಾಂಕ್ ಅಗೋಲಾ ಹಾಗೂ ಪ್ರಮಥ ಭಟ್ ಇದ್ದಾರೆ
ಟ್ರೋಫಿಯೊಂದಿಗೆ ರಾಜೀವ್ ಪವಾರ (ಬಲದಿಂದ ಮೊದಲನೆಯವರು). ತರಬೇತುದಾರರಾದ ಮಯಾಂಕ್ ಅಗೋಲಾ ಹಾಗೂ ಪ್ರಮಥ ಭಟ್ ಇದ್ದಾರೆ   

ಹುಬ್ಬಳ್ಳಿ: ‘ಬ್ಲೂಮ್ ಫೇರ್ ಪ್ರೊಡಕ್ಷನ್ ಮ್ಯಾನ್‌ ಗೋವಾದಲ್ಲಿ ನ. 22 ಮತ್ತು 23ರಂದು ಆಯೋಜಿಸಿದ್ದಹಂಟ್ ಇಂಡಿಯಾ ಇಂಟರ್‌ನ್ಯಾಷನಲ್ ಮೆನ್ ಬ್ಯೂಟಿ ಪ್ಯಾಜೆಂಟ್ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ರೂಪದರ್ಶಿ ರಾಜೀವ ಪವಾರ ದ್ವಿತೀಯ ಸ್ಥಾನ ಪಡೆದಿದ್ದಾರೆ’ ಎಂದು ಪ್ರಮಥ ಸ್ಟಾರ್ ಕಂಪನಿಯ ಮಾಲೀಕ ಪ್ರಮಥ ಭಟ್ ಹೇಳಿದರು.

‘ಇದೇ ಸ್ಪರ್ಧೆಯಲ್ಲಿ ನರಸಿಂಹ ಮೂರ್ತಿ ಅವರು ಎಂಟನೇ ಸ್ಥಾನ ಪಡೆದಿದ್ದಾರೆ. ಆ ಮೂಲಕ, ಕರ್ನಾಟಕದ ಇಬ್ಬರು ರೂಪದರ್ಶಿಯರು ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದು ಹೆಸರು ಮಾಡಿದ್ದಾರೆ. ಇವರೆಲ್ಲರಿಗೂ ಪ್ರಮಥ ಸ್ಟಾರ್ ಕಂಪನಿ ಮಾರ್ಗದರ್ಶನ ನೀಡಿತ್ತು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಯುವ ಪ್ರತಿಭೆಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರೋತ್ಸಾಹಿಸುವ ಸಲುವಾಗಿ, 2020ರ ಜನವರಿ ಅಂತ್ಯಕ್ಕೆ ಹುಬ್ಬಳ್ಳಿಯಲ್ಲಿ ಮೂರನೇ ಆವೃತ್ತಿಯ ಮಿಸ್ಟರ್ ಹ್ಯಾಂಡ್ಸಮ್ ಮತ್ತು ಮಿಸ್ ಗಾರ್ಜಿಯಸ್ ಸ್ಪರ್ಧೆ ಆಯೋಜಿಸಲಾಗುವುದು’ ಎಂದರು.

ADVERTISEMENT

ರಾಜೀವ ಪವಾರ ಮಾತನಾಡಿ, ‘ಸ್ಪರ್ಧೆಗಾಗಿ ನಡೆದ ಆಡಿಷನ್‌ನಲ್ಲಿ 500 ಮಂದಿ ಭಾಗವಹಿಸಿದ್ದರು. ಅಂತಿಮವಾಗಿ ಆಯ್ಕೆಯಾದ 20 ಮಂದಿ ಪೈಕಿ, ಭಾರತದಿಂದ ನಾನು ಹಾಗೂ ನರಸಿಂಹ ಮೂರ್ತಿ ಇದ್ದೆವು’ ಎಂದು ಸಂತಸ ವ್ಯಕ್ತಪಡಿಸಿದರು.

‘ಎರಡು ವರ್ಷದಿಂದ ಮಾಡೆಲಿಂಗ್‌ನಲ್ಲಿ ಸಕ್ರಿಯನಾಗಿರುವ ನಾನು, ಕೆಲ ತಿಂಗಳ ಹಿಂದೆ ಪ್ರಮಥ ಭಟ್ ಅವರಿಗೆ ಪರಿಚಯವಾದೆ. ಪ್ರಮಥ ಹಾಗೂ ಮಯಾಂಕ್ ಅಗೋಲಾ ಅವರ ಮಾರ್ಗದರ್ಶನದಲ್ಲಿ ಮ್ಯಾನ್‌ ಹಂಟ್ ಸ್ಪರ್ಧೆಯಲ್ಲಿ ಭಾಗವಹಿಸಿ, ಮೊದಲ ರನ್ನರ್‌ ಅಪ್‌ ಆದೆ’ ಎಂದು ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.