ಧಾರವಾಡ: ನಗರದ ಗಾಂಧಿಚೌಕದ ಕುಂಬಾರ ಓಣಿಯ ಬಸವಣ್ಣೆಪ್ಪ ಕುಂಬಾರ ಅವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 76 ಲೀಟರ್ ಮಿಲಿಟರಿ ಮದ್ಯವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ಧಾರೆ.
ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳ ತಂಡವು ಮನೆಯಲ್ಲಿ ಕಾರ್ಯಾಚರಣೆ ನಡೆಸಿದೆ. ‘ಫಾರ್ ಡಿಫೆನ್ಸ್ ಪರ್ಸನ್ಸ್ ಓನ್ಲಿ’ ಲೇಬಲ್ ಇರುವ ವಿವಿಧ ಬ್ರ್ಯಾಂಡ್‌ನ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಮಾರಾಟಕ್ಕಾಗಿ ಮದ್ಯ ಸಂಗ್ರಹಿಸಲಾಗಿದೆ. ಮದ್ಯದ ಅಂದಾಜು ಮೌಲ್ಯ ₹ 2.07 ಲಕ್ಷ. ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ಶಿವಾನಂದ ರಾಹುತರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.