
ನವಲಗುಂದ: ‘ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಂಗನವಾಡಿಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳಿಗೆ ಪೌಷ್ಟಿಕ ಆಹಾರದ ಜೊತೆಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವುದು ನಮ್ಮ ಸರ್ಕಾರದ ಆಶಯವಾಗಿದೆ’ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ತಾಲ್ಲೂಕಿನ ಯಮನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಾರಗೋಪ್ಪ ಗ್ರಾಮದಲ್ಲಿ 2025-26ನೇ ಸಾಲಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಯ ₹20 ಲಕ್ಷ ವೆಚ್ಚದ ಅನುದಾನದಲ್ಲಿ ನೂತನ ಅಂಗನವಾಡಿ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಂತರ ಗ್ರಾಮದಲ್ಲಿನ ಪಂಚಗೃಹ ಹಿರೇಮಠದ ಶಾಖಾ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಕೊಂಡರು. ಈ ವೇಳೆ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು.
ಇಒ ಪಿ.ಆರ್.ಬಡೇಖಾನ್, ಸಿಡಿಪಿಒ ಗಾಯತ್ರಿದೇವಿ ಪಾಟೀಲ, ಸಂಗಮೇಶ ಲೂತಿ, ಎಸ್.ಎಸ್.ಲಂಗೋಟಿ, ಗಂಗಾಧರ ಮಲ್ಲಾಪುರ, ಮಹಾಂತೇಶ ಕುಲಕರ್ಣಿ, ಚಂದ್ರಶೇಖರ ಗುರುಸಿದ್ದಪ್ಪನವರ, ಉಮೇಶ ಕಳ್ಳಿಮನಿ, ಹಣಮಂತಪ್ಪ ಮರಿಸಿದ್ದಪ್ಪನವರ, ಲಕ್ಷ್ಮಣ ನಾಯ್ಕ, ಪತ್ತೆಸಾಬ್ ಮುಲ್ಲಾನವರ, ಕಲ್ಲಪ್ಪ ಕುಲಕರ್ಣಿ, ಮಹಾಲಿಂಗಯ್ಯ ಹೊಸಮನಿ, ಶಶಿಧರ ಖಾತೆದಾರ್, ರವಿ ಹಡಪದ, ರಾಚಪ್ಪ ಮೇಲಿನಮನಿ,ಅಂಗನವಾಡಿ ಕಾರ್ಯಕರ್ತೆ ಬಸಮ್ಮ ಕಳ್ಳಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.