ADVERTISEMENT

‘ಕೈ’ ಟಿಕೆಟ್‌ಗೆ ಕುಂದಗೋಳದಲ್ಲೇ ಹೆಚ್ಚು ಪೈಪೋಟಿ

ವಿಧಾನಸಭಾ ಚುನಾವಣೆ: ಜಿಲ್ಲೆಯಲ್ಲಿ ಟೆಕೆಟ್ ಆಕಾಂಕ್ಷಿಗಳ ಸಂಖ್ಯೆ 48ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 13:12 IST
Last Updated 23 ನವೆಂಬರ್ 2022, 13:12 IST

ಹುಬ್ಬಳ್ಳಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್‌ಗಾಗಿ ಕೆಪಿಸಿಸಿಗೆ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ.

ಈ ಪೈಕಿ, ಕುಂದಗೋಳ ಕ್ಷೇತ್ರದಿಂದ ಅತಿ ಹೆಚ್ಚು 14 ಹಾಗೂ ಕಲಘಟಗಿ ಮತ್ತು ಧಾರವಾಡ ಗ್ರಾಮೀಣದಿಂದ ಅತಿ ಕಡಿಮೆ 2 ಮಂದಿ ಅರ್ಜಿ ಹಾಕಿದ್ದಾರೆ. ಉಳಿದಂತೆ ಹುಬ್ಬಳ್ಳಿ–ಧಾರವಾಡ ಪಶ್ಚಿಮದಿಂದ 10, ನವಲಗುಂದ ಮತ್ತು ಹು–ಧಾ ಸೆಂಟ್ರಲ್‌ನಿಂದ ತಲಾ 8 ಹಾಗೂ ಹು–ಧಾ ಪೂರ್ವ ಮತ್ತು ಕಲಘಟಗಿಯಿಂದ ತಲಾ 3 ಅರ್ಜಿಗಳು ಸಲ್ಲಿಕೆಯಾಗಿವೆ.

ಟಿಕೆಟ್‌ಗೆ ಅರ್ಜಿ ಹಾಕಲು ಹಿಂದೆ ನಿಗದಿಯಾಗಿದ್ದ ಗಡುವಿನ (ನ. 5ರಿಂದ 15ರವರೆಗೆ) ಹೊತ್ತಿಗೆ ಕೆಪಿಸಿಸಿಗೆ 25 ಅರ್ಜಿಗಳು ಸಲ್ಲಿಕೆಯಾಗಿದ್ದವು. ನಂತರ, ದಿನಾಂಕವನ್ನು ನ. 21ರವರೆಗೆ ವಿಸ್ತರಿಸಲಾಗಿತ್ತು. ಮಾಜಿ ಸಚಿವರು, ಶಾಸಕರು ಹಾಗೂ ಪಾಲಿಕೆಯ ಸದಸ್ಯರು ಕೂಡ ಟಿಕೆಟ್ ಆಕಾಂಕ್ಷಿಗಳ ರೇಸ್‌ನಲ್ಲಿದ್ದಾರೆ.

ADVERTISEMENT

ಅರ್ಜಿ ಸಲ್ಲಿಕೆಯ ದಿನಾಂಕ ಅಂತ್ಯಗೊಂಡಿದ್ದು, ಪಕ್ಷದ ಘಟನಾಘಟಿ ನಾಯಕರೆಲ್ಲರೂ ಅವಧಿಗೆ ಮುಂಚೆ ಅರ್ಜಿ ಹಾಕಿದ್ದಾರೆ. ಆದಾಗ್ಯೂ, ಮತ್ತೆ ಯಾರಾದರೂ ಅರ್ಜಿ ಹಾಕುವುದಿದ್ದರೆ ಸೂಕ್ತ ಕಾರಣ ನೀಡಿ, ಹೈಕಮಾಂಡ್ ಅನುಮತಿ ಪಡೆದು ಅರ್ಜಿ ಸಲ್ಲಿಸಬೇಕು ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದರು.

ಆಕಾಂಕ್ಷಿಗಳು ಯಾರ‍್ಯಾರು?

ನವಲಗುಂದ ಕ್ಷೇತ್ರ (69): ಮಾಜಿ ಸಚಿವ ಕೆ.ಎನ್. ಗಡ್ಡಿ, ಮಾಜಿ ಶಾಸಕ ಎನ್‌.ಎಚ್. ಕೋನರಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶಿವಾನಂದ ಕರಿಗಾರ, 2018ರ ಅಭ್ಯರ್ಥಿ ವಿನೋದ ಅಸೂಟಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಕೆಪಿಸಿಸಿ ಮಾಜಿ ಸದಸ್ಯ ರಾಜಶೇಖರ ಮೆಣಸಿನಕಾಯಿ, ಡಿಸಿಸಿ ಸೇವಾದಳದ ಅಧ್ಯಕ್ಷ ಚಂಬಣ್ಣ ಎಚ್., ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ.

ಕುಂದಗೋಳ ಕ್ಷೇತ್ರ (70): ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ,ಚಂದ್ರಶೇಖರ ಜುಟ್ಟಲ (ಮಾಜಿ ಶಾಸಕರ ಮಗ), ಮುತ್ತಣ್ಣ ಶಿವಳ್ಳಿ (ದಿ. ಸಿ.ಎಸ್. ಶಿವಳ್ಳಿ ಸಹೋದರ), ಅರವಿಂದ ಕಟಗಿ, ಶಿವಾನಂದ ಬೆಣತೂರ, ರಮೇಶ ಕೊಪ್ಪದ, ಜಗದೀಶ ಉಪ್ಪಿನ, ದೃತಿ ಸಾಲಮನಿ, ಸುರೇಶ ಸವಣೂರ, ಯಲ್ಲಪ್ಪ ಹೆಬಸೂರ, ಯಲ್ಲಪ್ಪ ದಾಬಗೊಂಡಿ, ಜಿ.ಸಿ. ಪಾಟೀಲ, ಹಜಾರೆಸಾಬ್ ನದಾಫ, ಜಗನ್ನಾಥ ಗೌಡರ ಹಾಗೂ ಗುರುರಾಜ ದೊಡ್ಡಮನಿ.

ಧಾರವಾಡ ಗ್ರಾಮೀಣ ಕ್ಷೇತ್ರ (71): ಮಾಜಿ ಸಚಿವ ವಿನಯ ಕುಲಕರ್ಣಿ, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ.

ಹು–ಧಾ ‍ಪೂರ್ವ ಕ್ಷೇತ್ರ (72): ಹಾಲಿ ಶಾಸಕ ಪ್ರಸಾದ ಅಬ್ಬಯ್ಯ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಹನುಮಂತ ಬಂಕಾಪುರ, ಮೋಹನ ಹಿರೇಮನಿ.

ಹು–ಧಾ ಸೆಂಟ್ರಲ್ ಕ್ಷೇತ್ರ (73): ಮಾಜಿ ಮೇಯರ್ ಹಾಗೂ ಡಿಸಿಸಿ ಅಧ್ಯಕ್ಷ ಅನಿಲಕುಮಾರ ಪಾಟೀಲ, ಬ್ಲಾಕ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ, ಸದಾನಂದ ಡಂಗನವರ, ಗಿರೀಶ ಗದಿಗೆಪ್ಪಗೌಡರ, ಸತೀಶ ಮೆಹರವಾಡೆ, ಫಾರೂಕ ಅಬುನವರ, ಮೆಹಬೂಬ ಪಾಷ.

ಹು–ಧಾ ಪಶ್ಚಿಮ ಕ್ಷೇತ್ರ (74): ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಬ್ಲಾಕ್ ಅಧ್ಯಕ್ಷ ನಾಗರಾಜ ಗೌರಿ, ಕೆಪಿಸಿಸಿ ವಕ್ತಾರ ಪಿ.ಎಚ್. ನೀರಲಕೇರಿ, ಮಾಜಿ ಬ್ಲಾಕ್ ಅಧ್ಯಕ್ಷ ಬಸವರಾಜ ಮಲಕಾರಿ, ಮಹಾನಗರ ಪಾಲಿಕೆ ಸದಸ್ಯ ಮಯೂರ ಮೋರೆ, ಕೀರ್ತಿ ಮೋರೆ, , ಶರಣಪ್ಪ ಕೊಟಗಿ, ಆರ್‌.ಕೆ. ಪಾಟೀಲ, ಅಲ್ತಾಫ ಕಿತ್ತೂರ, ರಫಿಕ ಸಾವಂತನವರ.

ಕಲಘಟಗಿ ಕ್ಷೇತ್ರ (75): ಮಾಜಿ ಸಚಿವ ಸಂತೋಷ ಲಾಡ್, ವಿಧಾನ ಪರಿಷತ್ ಮಾಜಿ ಸಚಿವ ನಾಗರಾಜ ಛಬ್ಬಿ, ಇಂಟಕ್ ಅಧ್ಯಕ್ಷ ಬಂಗಾರೇಶ ಹಿರೇಮಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.