ADVERTISEMENT

ಮಾ.13ಕ್ಕೆ ಸಂಗೀತೋತ್ಸವ ಕಾರ್ಯಕ್ರಮ

ದಿ.ಪಂಡಿತ್‌ ಶೇಷಗಿರಿ ಹಾನಗಲ್‌ ಜನ್ಮಶತಾಬ್ದಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 14:54 IST
Last Updated 10 ಮಾರ್ಚ್ 2022, 14:54 IST

ಹುಬ್ಬಳ್ಳಿ: ‘ದಿ.ಪಂಡಿತ್‌ ಶೇಷಗಿರಿ ಹಾನಗಲ್‌ ಅವರ ಜನ್ಮಶತಾಬ್ದಿ ಅಂಗವಾಗಿ ಮಾ.13ರ ಸಂಜೆ 5ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಸಂಗೀತೋತ್ಸವ ಆಯೋಜಿಸಲಾಗಿದೆ’ ಎಂದು ಪ್ರಕಾಶ್‌ ಹಾನಗಲ್‌ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಂ.ಶೇಷಗಿರಿ ಹಾನಗಲ್‌ ಅವರ ಮೊಮ್ಮಗ ಧ್ರುವ ಅಜಯ ಹಾನಗಲ್‌ ಕೊಳಲು ವಾದನ, ಪಂ. ರವೀಂದ್ರ ಯಾವಗಲ್‌ ತಬಲಾ ವಾದನ ಹಾಗೂ ಪಂ.ಎಂ. ವೆಂಕಟೇಶ್‌ ಕುಮಾರ್‌ ಅವರು ಗಾಯನ ಪ್ರಸ್ತುತ ಪಡಿಸಲಿದ್ದಾರೆ. ಉದಯರಾಜ್‌ ಕರ್ಪೂರ್ ಹಾಗೂ ಗೋಪಾಲಕೃಷ್ಣ ಹೆಗಡೆ ತಬಲಾ ಹಾಗೂ ರವೀಂದ್ರ ಕಾತೋಟಿ ಹಾರ್ಮೋನಿಯಂ ಸಾಥ್‌ ನೀಡಲಿದ್ದಾರೆ’ ಎಂದು ಹೇಳಿದರು.

ವೈಷ್ಣವಿ ಹಾನಗಲ್‌, ಗಾಯಿತ್ರಿ ದೇಶಪಾಂಡೆ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.