ನವಲಗುಂದ: ಒತ್ತಡ ನಿವಾರಿಸಲು ಹಾಗೂ ದೈಹಿಕ ಮತ್ತು ಮಾನಸಿಕ ಸದೃಢತೆ ಕಾಪಾಡಿಕೊಳ್ಳಲು ಯುವಕರು ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಶಾಸಕ ಎನ್.ಎಚ್. ಕೋನರಡ್ಡಿ ತಿಳಿಸಿದರು.
ಹೆಬಸೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೆಬಸೂರ ಪ್ರೀಮಿಯರ್ ಲೀಗ್ ಸೀಸನ್–3 ಕ್ರಿಕೆಟ್ ಪಂದ್ಯಾವಳಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ ಹಲಗತ್ತಿ, ವೀರನಗೌಡರ ಮರಿಗೌಡರ, ಮಧುಸೂದನ ಹೊಂಬಳ, ಸುಮಂತ ಲಿಂಗರಡ್ಡಿ, ಪ್ರವೀಣ ಬ್ಯಾಹಟ್ಟಿ, ಆನಂದ ಹೊಸಮನಿ, ಅಲಿ ನದಾಫ್, ಶಿವಾನಂದ ಮುದರಡ್ಡಿ, ಇಮಾಮ ಪೀರಖಾನ, ದೀಪಕ ಮುದರಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.