ADVERTISEMENT

ಕೆಸಿಸಿಐಗೆ ನೂತನ ಸದಸ್ಯರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 15:33 IST
Last Updated 28 ಸೆಪ್ಟೆಂಬರ್ 2022, 15:33 IST
ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಡಳಿತ ಮಂಡಳಿಯ ನೂತನ ಸದಸ್ಯರು
ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಆಡಳಿತ ಮಂಡಳಿಯ ನೂತನ ಸದಸ್ಯರು   

ಹುಬ್ಬಳ್ಳಿ: ನಗರದಲ್ಲಿ ಬುಧವಾರ ನಡೆದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 93ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮೂರು ವರ್ಷಗಳ ಅವಧಿಗೆ 2022-2023, 2023-2024 ಹಾಗೂ 2024-2025ನೇ ಸಾಲಿಗೆ ಆಡಳಿತ ಮಂಡಳಿಯ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಿಂದ ಪ್ರಕಾಶ ಶೃಂಗೇರಿ, ವಿದ್ಯಾಧರ ಯಲಗಚ್ಛ, ಅಶೋಕ ಎನ್. ಲದವಾ, ಬಸವರಾಜ ಯಕಲಾಸಪೂರ, ಮಹೇಂದ್ರ ಠಕ್ಕರ, ಶಾಶ್ವತ ಪೂಜಾರ, ಶಿವಯೋಗಿ ಹಪ್ಪಳದ, ವೀರಣ್ಣ ಕಲ್ಲೂರ, ರಾಜಕಿರಣ ಬಿ. ಮೆಣಸಿನಕಾಯಿ ಹಾಗೂ ಮಹಾನಗರ ಪಾಲಿಕೆ ಹೊರತುಪಡಿಸಿ ಬ್ಯಾಡಗಿಯಿಂದ ಮಾಲತೇಶ ಬಿ. ಅರಳಿಮಟ್ಟಿ, ಇಳಕಲ್‌ನಿಂದ ವಿಶಾಲ ಜೈನ್, ಹೊನ್ನಾವರದಿಂದ ಮಂಜುನಾಥ ಜಿ. ಹೆಗಡೆ, ಬೆಳಗಾವಿಯಿಂದ ಬಸವರಾಜ ಎಸ್. ಜವಳಿ, ಹೊಸಪೇಟೆಯಿಂದ ಗುರುಸಿದ್ದೇಶ ಎಚ್. ಕೋತಂಬ್ರಿ ಹಾಗೂ ರಾಣೆಬೆನ್ನೂರಿನಿಂದ ಉಮೇಶ ಪಟ್ಟಣಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.

ಜಿ.ಕೆ. ಆದಪ್ಪಗೌಡರಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ, ಎಂ.ಸಿ. ಹಿರೇಮಠ, ವಸಂತ ಲದವಾ, ರಮೇಶ ಪಾಟೀಲ, ಮಹೇಂದ್ರ ಲದ್ದಡ, ಹಾಲಿ ಅಧ್ಯಕ್ಷ ವಿನಯ ಜೆ. ಜವಳಿ, ಉಪಾಧ್ಯಕ್ಷರಾದ ಎಸ್.ಪಿ. ಸಂಶಿಮಠ, ಸಂದೀಪ ಬಿಡಸಾರಿಯಾ, ಬಿ.ಎಸ್. ಸತೀಶ, ಗೌರವ ಕಾರ್ಯದರ್ಶಿಗಳಾದ ಪ್ರವೀಣ ಅಗಡಿ, ಶಂಕರ ಕೋಳಿವಾಡ ಇದ್ದರು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.