ಹುಬ್ಬಳ್ಳಿ: ಕರ್ನಾಟಕ ದಲಿತ ವಿಮೋಚನಾ ಸಮಿತಿಯ ಧಾರವಾಡ ಜಿಲ್ಲಾ ಸಮಿತಿಯ ಆಯ್ಕೆ ತಾಲ್ಲೂಕಿನ ಹಳ್ಯಾಳದಲ್ಲಿ ಇತ್ತೀಚೆಗೆ ಜರುಗಿತು.
ಸಿದ್ಧಾರ್ಥ ಮಲ್ಲಮ್ಮನವರ (ಜಿಲ್ಲಾ ಘಟಕದನೂನತ ಅಧ್ಯಕ್ಷ) ಸಂಘಟನಾ ಸಂಚಾಲಕರಾಗಿ ಓಂ ನಮಃ ಶಿವಾಯ ವೀರಾಪೂರ, ರೇವಣಸಿದ್ಧಪ್ಪ ಗುತ್ತಲ, ಮೈಲಾರಿ ಹಂಚಿನಮನಿ, ಸಿದ್ದು ಮಾದರ, ಶಾಂತರಾಜು ಬಿ.ಟಿ., ವಿನಾಯಕ ಮನ್ನಾಳಕೇರಿ, ಸುರೇಶ ಹುಣಸಿಮರದ ಹಾಗೂ ಖಜಾಂಚಿಯಾಗಿ ದುರಗಪ್ಪ ವಾಲಿಕಾರ ಅವರನ್ನು ಆಯ್ಕೆ ಮಾಡಲಾಯಿತು. ಹುಬ್ಬಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಸುರೇಶ ಶಿವಣ್ಣನವರ ಹಾಗೂ ಕುಂದಗೋಳ ತಾಲ್ಲೂಕು ಅಧ್ಯಕ್ಷರಾಗಿ ಅಶೋಕ ಸಂಶಿ ಆಯ್ಕೆಯಾದರು.
ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸುರೇಶ ಖಾನಾಪುರ ಮಾತನಾಡಿ, ‘ನೂತನ ಪದಾಧಿಕಾರಿಗಳು ಅಂಬೇಡ್ಕರ್ ಸಿದ್ಧಾಂತ, ಸಂವಿಧಾನದಲ್ಲಿ ನಂಬಿಕೆ ಇಡಬೇಕು. ಪ್ರೊ.ಬಿ. ಕೃಷ್ಣಪ್ಪ ಅವರು ಹಾಕಿಕೊಟ್ಟ ಹೋರಾಟದ ಮಾರ್ಗದಲ್ಲಿ ಕೆಲಸ ಮಾಡಬೇಕು’ ಎಂದರು.
ಸಮಿತಿಯ ಕಾರ್ಯಾಧ್ಯಕ್ಷ ಕೆಂಚಪ್ಪ ಮಲ್ಲಮ್ಮನವರ ಮತ್ತು ಆನಂದ ಪೂಜಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.