ADVERTISEMENT

ಹುಬ್ಬಳ್ಳಿ | ಮೂರುಸಾವಿರ ಮಠ ಉತ್ತರಾಧಿಕಾರಿ ಚರ್ಚೆ ಅನಗತ್ಯ: ಮೋಹನ ಲಿಂಬಿಕಾಯಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2020, 9:24 IST
Last Updated 21 ಫೆಬ್ರುವರಿ 2020, 9:24 IST
ಮೋಹನ ಲಿಂಬಿಕಾಯಿ
ಮೋಹನ ಲಿಂಬಿಕಾಯಿ   

ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಫೆ. 23 ರಂದು ಸಭೆ ನಡೆಸಲು ಯಾರೂ ಅನುಮತಿ ಪಡೆದಿಲ್ಲ ಎಂದು ಮಠದ ಉನ್ನತ ಸಮಿತಿ ಸಂಚಾಲಕ ಮೋಹನ ಲಿಂಬಿಕಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠದ ಶ್ರೀಗಳು ಅಥವಾ ಮ್ಯಾನೇಜರ್ ಅವರಿಂದ ಯಾರೂ ಅನುಮತಿ ಪಡೆದಿಲ್ಲ. ಹಾಗಾಗಿ, ಅಂದು ಯಾವುದೇ ಸಭೆ ಅಲ್ಲಿ ನಡೆಯುವುದಿಲ್ಲ ಎಂದರು.

ಉತ್ತರಾಧಿಕಾರಿ ಆಯ್ಕೆಗೆ ಎರಡು ಪತ್ರಿಕೆಗಳಲ್ಲಿ ಆಯ್ಕೆ ಕುರಿತು ಪ್ರಕಟಣೆ ನೀಡಬೇಕು. ಜೊತೆಗೆಭಕ್ತರ ಸಭೆ ಕರೆದು ಸರ್ವಾನುಮತ ಅಥವಾ ಬಹುಮತದಿಂದ ಆಯ್ಕೆ ಮಾಡಬೇಕು. ದಿಂಗಾಲೇಶ್ವರರ ಆಯ್ಕೆಯಲ್ಲಿ ಇದ್ಯಾವುದೂ ಆಗಿಲ್ಲ ಎಂದು ಹೇಳಿದರು.

ADVERTISEMENT

ಮಠದ‌‌‌ ಶ್ರೀಗಳ ಮುಂದೆ ಈಗ ಉತ್ತರಾಧಿಕಾರಿ ಆಯ್ಕೆ ವಿಷಯವಿಲ್ಲ. ಅವರು ಸಮರ್ಥರಾಗಿದ್ದು, ಮಠವನ್ನು ಮುಂದುವರಿಸಲಿದ್ದಾರೆ. ಉತ್ತರಾಧಿಕಾರಿ ಚರ್ಚೆ ಅನಗತ್ಯಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.