ADVERTISEMENT

ಜಿಲ್ಲೆಗೆ ಬೀಜದ ಪಾರ್ಸೆಲ್ ಬಂದಿಲ್ಲ: ಕೃಷಿ ಇಲಾಖೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 13:04 IST
Last Updated 27 ಆಗಸ್ಟ್ 2020, 13:04 IST

ಧಾರವಾಡ: ‘ಅನುಮಾನಾಸ್ಪದ ಬಿತ್ತನೆ ಬೀಜ ಇರುವ ಪೊಟ್ಟಣಗಳ ಪಾರ್ಸೆಲ್ ಜಿಲ್ಲೆಯ ಯಾವುದೇ ರೈತರಿಗೆ ಬಂದಿಲ್ಲ. ಆದರೂ ಈ ಕುರಿತು ಎಚ್ಚರವಹಿಸಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಐ.ಬಿ.ರಾಜಶೇಖರ ತಿಳಿಸಿದರು.

‘ಅನಾಮಧೇಯ ಮೂಲಗಳಿಂದ ಅಮೆರಿಕ, ಬ್ರಿಟನ್‌, ಜಪಾನ್‌ ಮೊದಲಾದ ದೇಶಗಳಿಗೆ ಬೀಜಗಳ ಪಾರ್ಸೆಲ್‌ ಬಂದಿವೆಯಂತೆ. ನಮ್ಮ ದೇಶಕ್ಕೂ ಬರುವ ಸಾಧ್ಯತೆ ಇದ್ದು, ಬಿತ್ತನೆ ಬೀಜದ ಪಾರ್ಸೆಲ್‌ ಬಂದರೆ ತಕ್ಷಣ ಮಾಹಿತಿ ಕೊಡಿ ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಈ ಕುರಿತಂತೆ ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಧಿಕಾರಿಗಳ ಮೂಲಕ ರೈತರಿಗೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಇದರೊಂದಿಗೆ ಪಾರ್ಸೆಲ್, ಕೊರಿಯರ್ ಕಚೇರಿಗಳಿಗೂ ಮಾಹಿತಿ ನೀಡಲಾಗಿದೆ. ಇಂಥ ಅನುಮಾನಸ್ಪದ ಪೊಟ್ಟಣಗಳಿರುವ ಪಾರ್ಸೆಲ್ ಬಂದಲ್ಲಿ ಕೂಡಲೇ ಕೃಷಿ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.