ಹುಬ್ಬಳ್ಳಿ: ಶಿವಗಿರಿ ಕಾಲೊನಿಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಚಯದಲ್ಲಿನ ಲಿಫ್ಟ್ ಕೆಲಸ ನೀಡುವುದಾಗಿ ಅಯೋಧ್ಯಾ ನಗರದ ಫರ್ವೇಜ್ ಬಳಗಾನೂರು ಎಂಬಾತ ಶಕ್ತಿ ಕಾಲೊನಿಯ ಸದಾನಂದ ಜಮಖಂಡಿ ಅವರಿಂದ ₹3.50 ಲಕ್ಷ ಮೊತ್ತದ ಚೆಕ್ ಪಡೆದು ವಂಚಿಸಿದ್ದಾನೆ. ಒಂದು ವರ್ಷದಿಂದ ಕೆಲಸವನ್ನೂ ನೀಡದೆ, ಹಣವನ್ನು ಮರಳಿಸದೆ ವಂಚಿಸಿರುವ ಆರೋಪದ ಮೇಲೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನಾಭರಣ ಕಳವು: ಹಳೇ ಹುಬ್ಬಳ್ಳಿಯ ಆನಂದನಗರದ ಚಿದಂಬರ ಲಕ್ಕಣ್ಣವರ ಅವರ ಮನೆ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ₹60 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.