ADVERTISEMENT

ಪಂಚಮಸಾಲಿ, ಆದಿಚುಂಚನಗಿರಿ ಶ್ರೀಗಳು ಹೋರಾಟದ ನೇತೃತ್ವ ವಹಿಸಲಿ: ಮುಸ್ತಫಾ

2ಬಿ ಮೀಸಲಾತಿ ರದ್ದು: ಮುಸ್ಲಿಂ ಮೀಸಲಾತಿ ಹೋರಾಟ ಸಮಿತಿ ಮನವಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2023, 17:52 IST
Last Updated 27 ಮಾರ್ಚ್ 2023, 17:52 IST

ಹುಬ್ಬಳ್ಳಿ: ‘ಹಿಂದುಳಿದ ಮುಸ್ಲಿಂ ಸಮುದಾಯದ 2ಬಿ ಮೀಸಲಾತಿಯನ್ನು ರದ್ದುಪಡಿಸಿ, ಅವರನ್ನು ಇಡಬ್ಲ್ಯೂಎಸ್‌ ಗೆ ಸೇರಿಸಿರುವ ಸರ್ಕಾರದ ನಿರ್ಧಾರದ ವಿರುದ್ಧದ ಹೋರಾಟದ ನೇತೃತ್ವವನ್ನು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ, ಹರಿಹರ ಪೀಠದ ವಚನಾನಂದ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಿಕೊಳ್ಳಬೇಕು’ ಎಂದು ಮುಸ್ಲಿಂ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಮುಸ್ತಫಾ ಕುನ್ನಿಭಾವಿ ಮನವಿ ಮಾಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಸ್ಲಿಂ ಸಮುದಾಯವು ಲಿಂಗಾ ಯತರು ಮತ್ತು ಒಕ್ಕಲಿಗರೊಂದಿಗೆ ಸೋದರ ಸಂಬಂಧ ಹೊಂದಿದೆ. ಅವರ ಮೀಸಲಾತಿ ಬೇಡಿಕೆ ನ್ಯಾಯೋಚಿತ. ಆದರೆ, ನಮ್ಮ ಮೀಸಲಾತಿ ಕಿತ್ತು ಹಾಕಿ, ಅವೆರಡೂ ಸಮುದಾಯಗಳಿಗೆ ಹಂಚಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಸಹೋದರರ ನಡುವೆ ಜಗಳ‌ ಹಚ್ಚುವ ಪ್ರಯತ್ನ ಮಾಡಿ ದ್ದಾರೆ. ಅದು ಎಂದಿಗೂ ಸಾಧ್ಯವಿಲ್ಲ’ ಎಂದು ಹೇಳಿದರು.

‘ರಾಜಕೀಯ ಕಾರಣಕ್ಕಾಗಿ ಸಮುದಾಯಗಳ ನಡುವೆ ದ್ವೇಷ ಭಾವನೆ ಹುಟ್ಟಿಸುವ ಸರ್ಕಾರದ ಈ ನಡೆಯನ್ನು ಎರಡೂ ಸಮುದಾಯಗಳ ಶ್ರೀಗಳು ಖಂಡಿಸಿ, ಸರ್ಕಾರದ ಕಿವಿ ಹಿಂಡಬೇಕು.‌ ತಮಗೆ‌ ಕೊಟ್ಟಿರುವ ಮೀಸಲಾತಿ ತಿರಸ್ಕರಿಸಿ, 2ಬಿ‌ ಮೀಸಲಾತಿ ಮುಂದುವರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಮುಸ್ಲಿಂ ಸಮು ದಾಯದ ಹೋರಾಟಕ್ಕೆ ಮಾರ್ಗದರ್ಶನ ಮಾಡಬೇಕು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.