ADVERTISEMENT

’ನೈತಿಕ ಪೊಲೀಸ್‌ ಗಿರಿ ಪ್ರದರ್ಶಿಸಿದರೆ ಹುಷಾರ್‌’

ಹಿಂದೂ ಸಂಘಟನೆ ಶಾಂತಿ ಸಭೆಯಲ್ಲಿ ಎಸಿಪಿ ಶ್ರೀಕಾಂತ ಕಟ್ಟಿಮನಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 19:55 IST
Last Updated 2 ಆಗಸ್ಟ್ 2019, 19:55 IST

ಹುಬ್ಬಳ್ಳಿ: ‘ಹಿಂದೂ–ಮುಸ್ಲಿಂ ಎರಡೂ ಸಮಾಜದವರು ಗಣೇಶ ಚತುರ್ಥಿ ಹಾಗೂ ಬಕ್ರೀದ್‌ ಹಬ್ಬವನ್ನು ಶಾಂತಿಯಿಂದ ಆಚರಿಸಬೇಕು. ಯಾರಾದರೂ ನೈತಿಕ ಪೊಲೀಸ್‌ ಗಿರಿ ಪ್ರದರ್ಶಿಸಲು ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ದಕ್ಷಿಣ ವಿಭಾಗದ ಎಸಿಪಿ ಎಸ್.ಬಿ. ಕಟ್ಟಿಮನಿ ಎಚ್ಚರಿಕೆ ನೀಡಿದರು.

ಇಲ್ಲಿನ ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ನಡೆದ ಹಿಂದೂ ಸಂಘಟನೆ ಮುಖಂಡರ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ಹಬ್ಬ, ಹರಿ ದಿನಗಳಿದ್ದಾಗ ಮಾತ್ರ ಧರ್ಮದ ನಡುವೆ ಭಾವೈಕ್ಯತೆ ಬೆಳೆಯುತ್ತದೆ. ಪೂರ್ವಜರು ನಡೆಸಿಕೊಂಡು ಬಂದಿರುವ ದೈವಿ ಪರಿಕಲ್ಪನೆಯ ಸಂಕೇತವಾದ ಹಬ್ಬಗಳನ್ನು ಎಲ್ಲರೂ ಶಾಂತಿಯಿಂದ ಆಚರಿಸಬೇಕು’ ಎಂದರು.

ADVERTISEMENT

‘ಹುಬ್ಬಳ್ಳಿ ಶಾಂತಿಯ ನಗರ. ಎಲ್ಲ ಧರ್ಮದವರೂ ಇಲ್ಲಿ ಪ್ರೀತಿ ವಿಶ್ವಾಸದಿಂದ ಬದುಕುತ್ತಿದ್ದಾರೆ. ಅದೇ ವಿಶ್ವಾಸ ಮುಂದೆಯೂ ಇರಬೇಕು. ಯಾವುದೇ ಕಾರಣಕ್ಕೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿ ಶಾಂತಿ ಕದಡುವ ಪ್ರಯತ್ನ ಯಾರೂ ಮಾಡಬಾರದು’ ಎಂದರು.

ಕಸಬಾ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಶಾಮರಾವ್‌ ಸಜ್ಜನರ, ಶಹರ ಠಾಣೆ ಇನ್‌ಸ್ಪೆಕ್ಟರ್‌ ಗಿರೀಶ ಬೋಜನ್ನವರ, ಬೆಂಡಿಗೇರಿ ಠಾಣೆ ಇನ್‌ಸ್ಪೆಕ್ಟರ್‌ ಸಂತೋಷ ಎನ್‌. ಹಾಗೂ ಸಂಘಟನೆ ಮುಖಂಡರಾದ ರಾಜಕುಮಾರ ಕಾಮರೆಡ್ಡಿ, ದೇವೇಂದ್ರಪ್ಪ ಇಟಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.