ADVERTISEMENT

ಲಾಕ್‌ಡೌನ್: ನಿಯಮ ಲೆಕ್ಕಿಸದೆ ಖರೀದಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 16:40 IST
Last Updated 29 ಏಪ್ರಿಲ್ 2021, 16:40 IST
ಹುಬ್ಬಳ್ಳಿಯ ಅಶೋಕನಗರದ ರೈಲ್ವೆ ಕೆಳ ಸೇತುವೆ ಬಳಿ ಪೊಲೀಸರು, ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್ ಸವಾರನನ್ನು ತಡೆದು ಎಚ್ಚರಿಕೆ ನೀಡಿದರು
ಹುಬ್ಬಳ್ಳಿಯ ಅಶೋಕನಗರದ ರೈಲ್ವೆ ಕೆಳ ಸೇತುವೆ ಬಳಿ ಪೊಲೀಸರು, ಅನಗತ್ಯವಾಗಿ ಓಡಾಡುತ್ತಿದ್ದ ಬೈಕ್ ಸವಾರನನ್ನು ತಡೆದು ಎಚ್ಚರಿಕೆ ನೀಡಿದರು   

ಹುಬ್ಬಳ್ಳಿ: ಲಾಕ್‌ಡೌನ್ ನಡುವೆಯೂ ಜನರ ಅನುಕೂಲಕ್ಕಾಗಿ ಬೆಳಿಗ್ಗೆ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಈ ಸಮಯದಲ್ಲಿ ಕೊರೊನಾ ಸೋಂಕು ಹರಡದಂತೆ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಆದರೆ, ಜನ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಮಾಸ್ಕ್ ಧರಿಸದೆ ಹಾಗೂ ಸೂಕ್ತ ಅಂತರ ಕಾಯ್ದುಕೊಳ್ಳದೆ ಖರೀದಿಯಲ್ಲಿ ತೊಡಗುವುದು ಸಾಮಾನ್ಯವಾಗಿದೆ.

ಜನತಾ ಬಜಾರ್, ಸಿದ್ಧಾರೂಢ ಮಠದ ರಸ್ತೆಯಲ್ಲಿ ನಡೆಯುತ್ತಿರುವ ಬೀದಿ ವ್ಯಾಪಾರ, ಎಪಿಎಂಸಿ, ಹಳೇ ಹುಬ್ಬಳ್ಳಿ ಸೇರಿದಂತೆ ಬಹುತೇಕ ಕಡೆ ಗುರುವಾರ ಜನ ನಿಯಮಗಳನ್ನು ಲೆಕ್ಕಿಸದೆ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ನಿಯಮಗಳ ಪಾಲನೆ ಕುರಿತು ನಿಗಾ ವಹಿಸಬೇಕಾದವರು ಈ ಸ್ಥಳಗಳಲ್ಲಿ ಕಾಣಲಿಲ್ಲ.

ಲಾಕ್‌ಡೌನ್ ಇದ್ದರೂ ವಾಹನಗಳ ಅನಗತ್ಯ ಸಂಚಾರ ನಡೆಯುತ್ತಿದೆ. ಚನ್ನಮ್ಮನ ವೃತ್ತ ಸೇರಿದಂತೆ ಕೆಲ ಪ್ರಮುಖ ಸ್ಥಳಗಳನ್ನು ಹೊರತುಪಡಿಸಿದರೆ, ಉಳಿದ ಯಾವ ಕಡೆಯೂ ಪೊಲೀಸರು ಇರಲಿಲ್ಲ. ಇದರಿಂದಾಗಿ ದ್ವಿಚಕ್ರ ವಾಹನಗಳ ಸಂಚಾರ ಸೇರಿದಂತೆ ವಿವಿಧ ಬಗೆಯ ವಾಹನಗಳ ಸಂಚಾರ ಸಾಮಾನ್ಯವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.