ADVERTISEMENT

ಜಾರ್ಜಿಯಾದಲ್ಲಿ ರಾಜ್ಯೋತ್ಸವ ಆಚರಣೆಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 22:18 IST
Last Updated 28 ಅಕ್ಟೋಬರ್ 2021, 22:18 IST
   

ಹುಬ್ಬಳ್ಳಿ: ಯುರೋಪ್‌ನ ಜಾರ್ಜಿಯಾದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಅನುಮೋದನೆ ನೀಡಿ, ಅಲ್ಲಿಯ ಸರ್ಕಾರ ಕನ್ನಡದ ಮಹತ್ವವನ್ನು ಉಲ್ಲೇಖಿಸಿ ಅಧಿಕೃತವಾಗಿ ಘೋಷಣೆ ಮಾಡಿದೆ.

ಕನ್ನಡ ಭಾಷೆಯ ಇತಿಹಾಸ ಮತ್ತು ಅದರ ಮಹತ್ವವನ್ನು ಕೊಂಡಾಡಿರುವ ಜಾರ್ಜಿಯಾದ ಗವರ್ನರ್ ಬ್ರಯಾನ್ ಪಿ. ಕೆಂಪ್, ‘ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡವನ್ನು ನಮ್ಮ ಶಿಕ್ಷಣ ಇಲಾಖೆಯು ಐತಿಹಾಸ ಭಾಷೆ ಎಂದು ಗುರುತಿಸಿದೆ. ಕನ್ನಡ ಭಾಷೆ ಮತ್ತು ಕರ್ನಾಟಕದ ಮಹತ್ವ ಸಾರುವ ರಾಜ್ಯೋತ್ಸವ ಆಚರಣೆಯನ್ನು ಪ್ರತಿ ವರ್ಷ ನ. 1ರಂದು ಇಲ್ಲಿನ ಕನ್ನಡಿಗರು ಆಚರಿಸುತ್ತಾರೆ’ ಎಂದು ಹೇಳಿದ್ದಾರೆ.

ಜಾರ್ಜಿಯಾದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಅನುಮೋದನೆ ನೀಡಿ, ಅಲ್ಲಿನ ಗವರ್ನರ್ ಹೊರಡಿಸಿರುವ ಸುತ್ತೋಲೆ

‘ಜಾರ್ಜಿಯಾದಲ್ಲಿ ಸುಮಾರು 500 ಕನ್ನಡಿಗರ ಕುಟುಂಬಗಳಿವೆ. ಇಲ್ಲಿರುವ ನೃಪತುಂಗ ಕನ್ನಡ ಕೂಟವು 30 ವರ್ಷಗಳಿಂದ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದೆ. ಅಂದು ಭಾವಗೀತೆ, ಜನಪದ ಗೀತೆ, ಸಿನಿಮಾ ಗೀತೆಗಳ ಗಾಯನ, ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಕೋವಿಡ್–19 ಕಾರಣದಿಂದಾಗಿ ವರ್ಚ್ಯುವಲ್ ಆಗಿ ಕಾರ್ಯಕ್ರಮ ನಡೆಯಲಿದೆ’ ಎಂದು ಕೂಟದ ಸದಸ್ಯ ಪ್ರಕಾಶ್ ರಾಮಚಂದ್ರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.