ಧಾರವಾಡ: ತಾಲ್ಲೂಕಿನ ತಲವಾಯಿ ಗ್ರಾಮದ ಹೊಲವೊಂದರ ಶೆಡ್‍ನಲ್ಲಿ ಇಟ್ಟಿದ್ದ 10 ಪಿಒಪಿ ಗಣೇಶ ಮೂರ್ತಿಗಳನ್ನು ಅಧಿಕಾರಿಗಳು ಬುಧವಾರ ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪರಿಸರ ಅಧಿಕಾರಿ ಜಗದೀಶ ಐ.ಎಚ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದಾರೆ. ಬಸವರಾಜ್ ಕಮ್ಮಾರ ಎಂಬವರು ಶೆಡ್‌ನಲ್ಲಿ ಇಟ್ದಿದ್ದ ಮೂರ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಪರಿಸರ ಅಧಿಕಾರಿ ಮನೋಹರ್ ಪತ್ತಾರ್, ಉಪತಹಶೀಲ್ದಾರ್ ಪ್ರೇಮಾನಂದ ದಡ್ಡನವರ್, ನಾಗರಾಜ್ ಗ್ರಾಮ ಲೆಕ್ಕಾಧಿಕಾರಿ, ನಾಗರಾಜ್ ಹಾಲನವರ್, ಹೆಡ್ ಕಾನ್ಸ್ಟೇಬಲ್, ಮುನಾಫ್ ಸೌದಾಗರ್, ಶಶಿಧರ್ ಕೋಡಿಹಳ್ಳಿ ಕಾರ್ಯಾಚರಣೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.