ADVERTISEMENT

ಇಂಧನ ಪೂರೈಕೆ ಟ್ಯಾಂಕರ್‌ ಸಂಚಾರ ಸ್ಥಗಿತ‌

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 15:30 IST
Last Updated 28 ಸೆಪ್ಟೆಂಬರ್ 2024, 15:30 IST
ಧಾರವಾಡ ಸಮೀಪ ರಾಯಪುರದಲ್ಲಿ ಶನಿವಾರ ನಿಂತಿದ್ದ ಇಂಧನ ಟ್ಯಾಂಕರ್‌ಗಳು
ಧಾರವಾಡ ಸಮೀಪ ರಾಯಪುರದಲ್ಲಿ ಶನಿವಾರ ನಿಂತಿದ್ದ ಇಂಧನ ಟ್ಯಾಂಕರ್‌ಗಳು   

ಧಾರವಾಡ: ಹುಬ್ಬಳ್ಳಿ–ಧಾರವಾಡದಲ್ಲಿ ಪೆಟ್ರೋಲ್‌, ಡೀಸೆಲ್‌ ಪೂರೈಕೆ ಟ್ಯಾಂಕರ್‌ ಸಂಚಾರಕ್ಕೆ ವಿಧಿಸಿದ ನಿರ್ಬಂಧ ತೆರವಿಗೆ ಆಗ್ರಹಿಸಿ ಐಒಸಿಎಲ್‌ ಮತ್ತು ಎಚ್‌ಪಿಸಿಎಲ್‌ ಟ್ರಾನ್ಸ್‌ಪೋರ್ಟರ್‌ ಕಂಟ್ರಾಕ್ಟರ್ಸ್‌ ಸಂಘಟನೆ ಮತ್ತು ಉತ್ತರ ಕರ್ನಾಟಕ ಟ್ಯಾಂಕರ್‌ ಡ್ರೈವರ್ಸ್ ಅಂಡ್‌ ಹೆಲ್ಪರ್ಸ್ ಸಂಘದವರು ಶನಿವಾರ ಟ್ಯಾಂಕರ್‌ ಸಂಚಾರ ಸ್ಥಗಿತಗೊಳಿಸಿ, ಪ್ರತಿಭಟನೆ ಆರಂಭಿಸಿದರು.

‘ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 4 ರಿಂದ ರಾತ್ರಿ 9ರವರೆಗಿನ ಅವಧಿಯಲ್ಲಿ ಟ್ಯಾಂಕರ್‌ಗಳಿಗೆ ಹುಬ್ಬಳ್ಳಿ–ಧಾರವಾಡ ಪ್ರವೇಶಿಸಲು ನಿರ್ಬಂಧಿಸಿರುವುದನ್ನು ತೆರವುಗೊಳಿಸಬೇಕು. ಶನಿವಾರ ಟ್ಯಾಂಕರ್‌ಗಳಿಗೆ ಇಂಧನ ತುಂಬಿಸಿಲ್ಲ. ಡಿಪೊ, ಸ್ಟೇಷನ್‌ಗಳಲ್ಲಿ ಇಂಧನ ದಾಸ್ತಾನು ಇರುವುದರಿಂದ ಸದ್ಯಕ್ಕೆ ಸಮಸ್ಯೆಯಾಗಿಲ್ಲ. ಬೇಡಿಕೆ ಈಡೇರಿಸುವವರೆಗೆ ನಾವು ಪ್ರತಿಭಟನೆ ಮುಂದುವರೆಸುತ್ತೇವೆ’ ಎಂದು ಸಂಘಟನೆಯ ಮುಖಂಡ ಮೂರ್ತಿಮಮದಾಪುರ ತಿಳಿಸಿದರು.

‘ನಮ್ಮ ಸಾರಿಗೆ ಡಿಪೊಗಳಲ್ಲಿ ಇಂಧನ ದಾಸ್ತಾನು ಇದೆ. ಬಸ್‌ಗಳ ಸಂಚಾರಕ್ಕೆ ಇಂಧನ ಕೊರತೆ ಇಲ್ಲ. ಹಾಸನದಿಂದ ಇಂಧನ ಪೂರೈಕೆಗೆ ಮುಂಜಾಗ್ರತೆಯಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯುಕೆಆರ್‌ಟಿಸಿ) ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗಾ ಎಂ. ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಧಾರವಾಡದ ರಾಯಪುರದಲ್ಲಿ ಟ್ಯಾಂಕರ್‌ಗಳಲ್ಲಿ ಇಂಧನ ತುಂಬಿಸಿ ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ,. ಹೊಸಪೇಟೆ, ಬಳ್ಳಾರಿ, ರಾಯಚೂರು, ಬೆಳಗಾವಿ, ವಿಜಯಪುರ, ಕಾರವಾರ, ಬಾಗಲಕೋಟೆ, ಶಿವಮೊಗ್ಗ ಮತ್ತು ದಾವಣಗೆರೆಗೆ ನಿತ್ಯ ಕಳುಹಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.