
ಪ್ರಜಾವಾಣಿ ವಾರ್ತೆಧಾರವಾಡ: ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿ ಗುರುವಾರ ಬಿರುಸಾಗಿ ಮಳೆ ಸುರಿಯಿತು. ಗುಡುಗು ಮಿಂಚಿನ ಆರ್ಭಟ ಜೋರಾಗಿತ್ತು. ಸಿಟಿ ಬಸ್ ನಿಲ್ದಾಣದ (ಸಿಬಿಟಿ) ಬಳಿಯ ಆಲದ ಮರ ದೊಡ್ಡ ಟೊಂಗೆ ಮುರಿದು ಬಿದ್ದು ಲಗೇಜ್ ವ್ಯಾನ್, ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ಮಹಾನಗರ ಪಾಲಿಕೆ ಮತ್ತು ಅರಣ್ಯ ಸಿಬ್ಬಂದಿ ಟೊಂಗೆಯನ್ನು ತೆರವುಗೊಳಿಸಿದರು. ಸಂಜೆ ಸುಮಾರು 20 ನಿಮಿಷ ಮಳೆ ಸುರಿಯಿತು. ಕೆಎಂಎಫ್ ಮುಂಭಾಗ (ಬಿಆರ್‌ಟಿಎಸ್ ಮಾರ್ಗ) ರಸ್ತೆಯಲ್ಲಿ ನೀರು ಆವರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.