ADVERTISEMENT

ರಾಜಕುಮಾರ ಯುಗಳಗೀತೆ ಗಾಯನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 9:34 IST
Last Updated 26 ನವೆಂಬರ್ 2019, 9:34 IST
   

ಹುಬ್ಬಳ್ಳಿ: ಯುಗಳಗೀತೆಗಳನ್ನು ಈಗಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಸುಮಧುರ ಎಂಟರ್‌ ಟೇನರ್ಸ್‌ ಡಿ. 14ರಂದು ಸವಾಯಿ ಗಂಧರ್ವ ಸಭಾಂಗಣದಲ್ಲಿ ಡಾ. ರಾಜಕುಮಾರ್ ನಟಿಸಿ ಅವರೇ ಹಾಡಿರುವ ಯುಗಳಗೀತೆಗಳ ಗಾಯನ ಸ್ಪರ್ಧೆ ಹಮ್ಮಿಕೊಂಡಿದೆ.

ಕಾರ್ಯಕ್ರಮದ ಸಂಘಟಕ ಸುನೀಲ ಪತ್ರಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಗಾಯಕರ ಧ್ವನಿ ಪರೀಕ್ಷೆಯನ್ನು ಡಿ. 1ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ರ ತನಕ ಲ್ಯಾಮಿಂಗ್ಟನ್‌ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಉತ್ತಮವಾಗಿ ಹಾಡಿದ 25 ಜೋಡಿಗಳನ್ನು ಡಿ. 14ರ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ. ಎಲ್ಲ ವಯಸ್ಸಿನ ಗಾಯಕರೂ ಪಾಲ್ಗೊಳ್ಳಬಹುದು’ ಎಂದರು.

‘ಧ್ವನಿಪರೀಕ್ಷೆಯಲ್ಲಿ ಪಾಲ್ಗೊಳ್ಳುವ ಗಾಯಕರು ಕಡ್ಡಾಯವಾಗಿ ಯುಗಳಗೀತೆಗಳನ್ನೇ ಹಾಡಬೇಕು. ಸಹ ಗಾಯಕರನ್ನೂ ಅವರೇ ಕರೆದುಕೊಂಡು ಬರಬೇಕು. ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಾಯನ ಸ್ಪರ್ಧೆ ನೋಡಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ’ ಎಂದರು.

ADVERTISEMENT

ಆಸಕ್ತರು ಸುನೀಲ ಅವರ ಮೊ. 9448340148 ಅಥವಾ 7019885131 ಸಂಪರ್ಕಿಸುವಂತೆ ಹೇಳಿದರು. ಕಾರ್ಯಕ್ರಮದ ಇನ್ನೊಬ್ಬ ಸಂಘಟಕಿ ಪ್ರೇಮಾ ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.