ADVERTISEMENT

ಧಾರವಾಡ: ಮೂರು ಕರುಗಳಿಗೆ ಜನ್ಮ ನೀಡಿದ ಹಸು

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:52 IST
Last Updated 13 ಜುಲೈ 2025, 5:52 IST
ನವಲಗುಂದದ ಸಯ್ಯದಭಾಷಾ ಹುಗ್ಗಿ ಎಂಬುವವರ ಹಸು ಮೂರು ಕರುಗಳಿಗೆ ಜನ್ಮ ನೀಡಿದೆ
ನವಲಗುಂದದ ಸಯ್ಯದಭಾಷಾ ಹುಗ್ಗಿ ಎಂಬುವವರ ಹಸು ಮೂರು ಕರುಗಳಿಗೆ ಜನ್ಮ ನೀಡಿದೆ   

ನವಲಗುಂದ: ಪಟ್ಟಣದ ಗುಡ್ಡದಕೇರಿ ಓಣಿಯ ಸಯ್ಯದಭಾಷಾ ಹುಗ್ಗಿ ಎಂಬುವವರ ಹಸು ಒಂದು ಹೆಣ್ಣು ಎರಡು ಗಂಡು ಕರುಗಳಿಗೆ ಜನ್ಮ ನೀಡಿರುವ ಅಪರೂಪದ ಸಂಗತಿ ನಡೆದಿದೆ. ದೇಸಿ ತಳಿಯ ಹಸು ಇದಾಗಿದ್ದು, ಮೂರು ಕರುಗಳೂ ಆರೋಗ್ಯವಾಗಿವೆ.

ಮೂರು ಕರು ಹಾಕಿದೆ ಎಂಬ ವಿಷಯ ಹರಡುತ್ತಿದ್ದಂತೆ ಅಕ್ಕಪಕ್ಕದ ಓಣಿ, ಊರಿನವರು ಬಂದು ಕರುಗಳನ್ನ ನೋಡಿ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಹಸು ಒಂದೇ ಕರು ಹಾಕೋದು. ಆದರೆ ತೀರಾ ಅಪರೂಪ ಎಂಬಂತೆ ಎರಡು ಕರು ಹಾಕಬಹುದು. ಮೂರು ಕರುಗಳಿಗೆ ಜನ್ಮ ನೀಡುವುದು ತುಂಬಾ ವಿರಳ ಎನ್ನುತ್ತಾರೆ ಪಶುವೈದ್ಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT