ಅಳ್ನಾವರ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಕ್ಕಳು, ವೃದ್ಧರು ಎನ್ನದೇ ದಾಳಿ ಮಾಡುತ್ತಿರುವ ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಲು ಕ್ರಮ ಜರುಗಿಸಿ ಎಂದು ಆಗ್ರಹಿಸಿ ಸೋಮವಾರ ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ಮನವಿ ನೀಡಿದರು.
ತಂಡೋಪತಂಡವಾಗಿ ನಾಯಿಗಳ ಹಿಂಡು ದಾಳಿ ಮಾಡುತ್ತಿವೆ. ಕಳೆದ ಹಲವು ದಿನದಲ್ಲಿ ಹಲವರನ್ನು ಕಚ್ಚಿವೆ. ಜನರು ಭಯದ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾರೆ. ಮಕ್ಕಳನ್ನು ಮನೆ ಬಿಟ್ಟು ಹೊರಗಡೆ ಕಳುಹಿಸಲು ಆಗದ ಸ್ಥಿತಿ ಇದೆ. ವೃದ್ಧರು ಮನೆ ಬಿಟ್ಟು ಹೊರಗಡೆ ಹೋಗುತ್ತಿಲ್ಲ. ಹಲವರು ತಮ್ಮ ಮಕ್ಕಳನ್ನು ಶಾಲೆಗೆ ತಾವೇ ಕರೆದುಕೊಂಡು ಹೋಗಿ ಮತ್ತೆ ಸಂಜೆ ಕರೆದುಕೊಂಡು ಬರುವ ವಾತಾರವಣ ಸೃಷ್ಟಿ ಆಗಿದೆ. ನಾಯಿಗಳ ಭಯದಿಂದ ಸಾಕಷ್ಟು ತೊಂದರೆ ಆಗುತ್ತಿದೆ. ಸೂಕ್ತ ಕ್ರಮ ಜರುಗಿಸಿ ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
ಪ್ರಶಾಂತ ಪವಾರ, ವಿನೋದ ಜಾಧವ, ಅಲೆಗ್ಸಾಂಡರ್ ಫನಾರ್ಂಡಿಸ್, ಯುನೂಸ್ ತಾಳಿಕೋಟಿ. ಚಂದ್ರಕಾಂತ ಕಲ್ಯಾಣಕರ, ಸಚಿನ ಸುಭೆ,ಶಾಹು ಶಿಂದೆ, ಅಜಯ ಗೋಕಾಕಕರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.