ADVERTISEMENT

ನಗರದ ಹಲವೆಡೆ ಪುನೀತ್ ಧ್ಯಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 4:06 IST
Last Updated 18 ಮಾರ್ಚ್ 2022, 4:06 IST
ಧಾರವಾಡದ ತೇಜಸ್ವಿನಗರ ಸರ್ಕಾರಿ ಶಾಲೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಯುವಕರು ರಕ್ತದಾನ ಮಾಡಿದರು
ಧಾರವಾಡದ ತೇಜಸ್ವಿನಗರ ಸರ್ಕಾರಿ ಶಾಲೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಯುವಕರು ರಕ್ತದಾನ ಮಾಡಿದರು   

ಧಾರವಾಡ: ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅವರ 47ನೇ ಜನ್ಮದಿನವನ್ನು ನಗರದ ಹಲವೆಡೆ ಸಾಮಾಜಿಕ ಕಾರ್ಯಗಳ ಮೂಲಕಅಭಿಮಾನಿಗಳು ಆಚರಿಸಿದರು.

ಜನ್ಮದಿನದಂದೇ ಬಿಡುಗಡೆಯಾದ ‘ಜೇಮ್ಸ್’ ಚಿತ್ರ ವೀಕ್ಷಣೆಗೂ ಅಭಿಮಾನಿಗಳು ಪದ್ಮಾ ಚಿತ್ರ ಮಂದಿರದ ಎದುರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ನೆಚ್ಚಿನ ನಟನ ಕಟೌಟ್‌ಗೆ ಕ್ಷೀರಾಭಿಷೇಕ ನೆರವೇರಿಸಿ, ಪಟಾಕಿ ಸಿಡಿಸಿ ಅಭಿಮಾನ ಮೆರೆದರು.

ತೆರೆ ಮೇಲೆ ಪುನೀತ್‌ ನೋಡಿದ ಅಭಿಮಾನಿಗಳು ‘ಅಪ್ಪು .... ಅಪ್ಪು...’ ಎಂದು ಕೂಗಿ ಸಂಭ್ರಮಿಸಿದರು. ನಂತರ ಹೊರಬಂದ ಅಭಿಮಾನಿಗಳು ಚಿತ್ರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಪುನೀತ್‌ ಅಗಲಿಕೆಯನ್ನು ನೆನೆದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಮೂಲಸೌಕರ್ಯ ಕೊರತೆ: ಚಿತ್ರಮಂದಿರದಲ್ಲಿ ಸೂಕ್ತ ಸೌಕರ್ಯ ಕಲ್ಪಿಸಿಲ್ಲ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದರು. ಬೇಸಿಗೆ ಕಾಲವಾದ್ದರಿಂದ ಕುಡಿಯುವ ನೀರಿನ ಸೌಕರ್ಯ ಕಲ್ಪಿಸುವಂತೆ ಪ್ರೇಕ್ಷಕರು ಆಗ್ರಹಿಸಿದರು. ಎರಡು ದಿನಗಳ ಹಿಂದೆಯೇ ಟಿಕೆಟ್‌ಗಳು ಮಾರಾಟವಾಗಿದ್ದವು. ಟಿಕೆಟ್ ಖರೀದಿಸಿದವರು ಚಿತ್ರಮಂದಿರಕ್ಕೆ ಬಂದಾಗ ಅಗತ್ಯ ಸೌಕರ್ಯಗಳು ಸಿಗಲಿಲ್ಲ ಎಂದು ಆರೋಪಿಸಿದರು.

ಶ್ರೀಆದರ್ಶ ಯುವಕ ಮಂಡಳಿ, ಧಾರವಾಡ ನಾಟ್ಯಸ್ಫೂರ್ತಿ ಆರ್ಟ್ ಅಂಡ್ ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ತೇಜಸ್ವಿನಗರ ಸರ್ಕಾರಿ ಶಾಲೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಸಾಹಿತಿ ಮಾರ್ತಾಂಡಪ್ಪ ಎಂ. ಕತ್ತಿ ಮಾತನಾಡಿದರು.

ರಕ್ತದಾನ ಶಿಬಿರ ಹಾಗೂ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಜನರು ರಕ್ತದಾನ ಮಾಡಿ ನೆಚ್ಚಿನ ನಟನಿಗೆ ಗೌರವ ಸಮರ್ಪಿಸಿದರು.

ಯುವಕ ಮಂಡಳದ ಮಂಜುನಾಥ ದೊಡಮನಿ, ನಾಟ್ಯಸ್ಫೂರ್ತಿಯ ಸದಾನಂದ ಬಂಗೇನವರ, ಶಿವಾನಂದ ಬಂಗೆಣ್ಣವರ ಇದ್ದರು.

ನಗರದ ಹಲವು ಬಡಾವಣೆಗಳಲ್ಲಿ ಪುನೀತ್ ಭಾವಚಿತ್ರಗಳು ಕಂಡುಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.