ADVERTISEMENT

ಹಸಿ ಮೆಣಸಿನಕಾಯಿ ಬೆಲೆ ಏರಿಕೆ

ರಾಜಶೇಖರ ಸುಣಗಾರ
Published 16 ಫೆಬ್ರುವರಿ 2022, 5:43 IST
Last Updated 16 ಫೆಬ್ರುವರಿ 2022, 5:43 IST
ಅಳ್ನಾವರದ ಮಂಗಳವಾರ ಸಂತೆಗೆ ಬಂದ ಸರಕು ಮಾರಾಟದ ಚೀಲಗಳು
ಅಳ್ನಾವರದ ಮಂಗಳವಾರ ಸಂತೆಗೆ ಬಂದ ಸರಕು ಮಾರಾಟದ ಚೀಲಗಳು   

ಅಳ್ನಾವರ: ಪಟ್ಟಣದಲ್ಲಿ ಮಂಗಳವಾರ ನಡೆದ ಸಂತೆಯಲ್ಲಿ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಕಾಡಿತು. ಹಸಿ ಮೆಣಸಿನಕಾಯಿ ಬೆಲೆ ಹೆಚ್ಚಳವಾಗಿದ್ದು ಗ್ರಾಹಕರಿಗೆ ‘ಖಾರ’ವಾದರೆ, ವ್ಯಾಪಾರಿಗಳಿಗೆ ‘ಸಿಹಿ’ಯಾಯಿತು.

ಎರಡು ವಾರಗಳ ಹಿಂದೆ ಪ್ರತಿ ಕೆ.ಜಿಗೆ ₹40ರಿಂದ ₹50 ಬೆಲೆ ಇದ್ದ ಹಸಿ ಮೆಣಸಿನಕಾಯಿ ಬೆಲೆ ಈ ಬಾರಿ ₹90ರಿಂದ ₹120ಕ್ಕೆ ಏರಿಕೆಯಾಗಿದೆ.

ಸ್ಥಳೀಯ ರೈತರಿಂದ ಮೆಣಸಿನಕಾಯಿ ಸಿಕ್ಕರೆ ಮುಂದಿನ ದಿನಗಳಲ್ಲಿ ಬೆಲೆ ಕಡಿಮೆಯಾಗಬಹುದು. ಎರಡ್ಮೂರು ವಾರ ಇದೇ ಬೆಲೆ ಇರುತ್ತದೆ ಎಂದು ವ್ಯಾಪಾರಿ ಸದ್ದಾಂ ಬಾಗವಾನ ಹೇಳುತ್ತಾರೆ.

ADVERTISEMENT

ಕೋವಿಡ್‌ ಕಾರಣದಿಂದ ಎರಡು ವರ್ಷ ಘಟಪ್ರಭಾ ಹಾಗೂ ಬೆಳಗಾವಿ ಭಾಗದಿಂದ ಬರುವ ಸಗಟು ತರಕಾರಿ ಬಂದ್ ಆಗಿತ್ತು. ಈಗ ಕಳೆದ ಹಲವು ವಾರಗಳಿಂದ ಅಲ್ಲಿಂದ ತರಕಾರಿ ಬರುತ್ತಿದೆ. ಬೆಳಗಾವಿಯಿಂದ ಬದನೆಕಾಯಿ, ತಪ್ಪಲು ಪಲ್ಲೆ, ಕೋತಂಬರಿ, ಬೀನ್ಸ್ , ಹಿರೇಕಾಯಿ ಮುಂತಾದ ತರಕಾರಿ ಬರುತ್ತದೆ ಎಂದು ಗಜಾನನ ರೇಳೆಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.