ADVERTISEMENT

ರಷ್ಯನ್ ಟ್ವಿಸ್ಟ್‌: ಕೆಎಲ್‌ಇ ವಿದ್ಯಾರ್ಥಿ ಅಶ್ವಿನ್ ದಾಖಲೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 15:09 IST
Last Updated 26 ಡಿಸೆಂಬರ್ 2020, 15:09 IST
ಪದಕ ಮತ್ತು ಪ್ರಮಾಣ ಪತ್ರದೊಂದಿಗೆ ಅಶ್ವಿನ್ ದರ್ಶನ್ ಶೆಟ್ಟಿಯಾರ್
ಪದಕ ಮತ್ತು ಪ್ರಮಾಣ ಪತ್ರದೊಂದಿಗೆ ಅಶ್ವಿನ್ ದರ್ಶನ್ ಶೆಟ್ಟಿಯಾರ್   

ಹುಬ್ಬಳ್ಳಿ: ಕೆಎಲ್‌ಇ ಸೊಸೈಟಿಯ ಬಿಬಿಎ ವಿದ್ಯಾರ್ಥಿ ಅಶ್ವಿನ್ ದರ್ಶನ್ ಶೆಟ್ಟಿಯಾರ್‌ ಅವರು ಒಂದು ನಿಮಿಷದಲ್ಲಿ 112 ರಷ್ಯನ್ ಟ್ವಿಸ್ಟ್‌ ಮಾಡುವ ಮೂಲಕ ಇಂಟರ್‌ನ್ಯಾಷನಲ್ ಬುಕ್ ಆಫ್‌ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿದ್ದಾರೆ. ಕಳೆದ ನವೆಂಬರ್‌ 20ರಂದು ಅವರು ಪ್ರದರ್ಶನ ನೀಡಿದ್ದರು.

ಕರಾಟೆ ಪಟುವಾಗಿರುವ ಅಶ್ವಿನ್ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದಿದ್ದಾರೆ. ವಿಶಿಷ್ಟ ಸಾಧನೆಗಳನ್ನು ಇಂಟರ್‌ನ್ಯಾಷನಲ್ ಬುಕ್ ಆಫ್‌ ರೆಕಾರ್ಡ್ಸ್‌ ದಾಖಲಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT