ADVERTISEMENT

ಸಸಿ ನೆಡುವುದು ಮಾದರಿ ಕೆಲಸ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 12:49 IST
Last Updated 24 ಜೂನ್ 2021, 12:49 IST
ಹುಬ್ಬಳ್ಳಿಯ ಕುಂಭಕೋಣಂ ಪ್ಲಾಂಟ್‌ನಲ್ಲಿ ಗುರುವಾರ ಗೃಹಸಚಿವ ಬಸವರಾಜ ಬೊಮ್ಮಾಯಿ ಸಸಿ ನೆಟ್ಟರು
ಹುಬ್ಬಳ್ಳಿಯ ಕುಂಭಕೋಣಂ ಪ್ಲಾಂಟ್‌ನಲ್ಲಿ ಗುರುವಾರ ಗೃಹಸಚಿವ ಬಸವರಾಜ ಬೊಮ್ಮಾಯಿ ಸಸಿ ನೆಟ್ಟರು   

ಹುಬ್ಬಳ್ಳಿ: ಜನಸಂಘದ ಸಂಸ್ಥಾಪಕ ಶ್ಯಾಮ್‌ಪ್ರಸಾದ ಮುಖರ್ಜಿ ಅವರ ಪುಣ್ಯಸ್ಮರಣೆ ಅಂಗವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಗುರುವಾರ ನಗರದ ಕುಂಭಕೋಣಂ ಪ್ಲಾಂಟ್‌ನಲ್ಲಿ ಸಸಿ ನೆಟ್ಟರು.

ಬಿಜೆಪಿ ರಾಜ್ಯದಲ್ಲಿ 11 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದೆ. ಇದರ ಭಾಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಪಾಲ್ಗೊಂಡಿದ್ದರು.

ಬಳಿಕ ಮಾತನಾಡಿದ ಅವರು ’ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಅಪಾರವಾದ ಕೊಡುಗೆ ನಾವು ಸ್ಮರಿಸಬೇಕಾಗಿದೆ. ಅವರ ನೆನಪಿನಲ್ಲಿ ರಾಜ್ಯದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪರಿಸರ ರಕ್ಷಣೆಯ ತುರ್ತು ಕಾಲಘಟ್ಟದಲ್ಲಿರುವ ನಮಗೆ ಸಸಿಗಳನ್ನು ನೆಡುತ್ತಿರುವುದು ಮಾದರಿ ಕೆಲಸವಾಗಿದೆ’ ಎಂದರು.

ADVERTISEMENT

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಕಿರಣ ಉಪ್ಪಾರ, ವೈದ್ಯ ಸಚಿನ್ ಹೊಸಕಟ್ಟಿ, ಪ್ರಮುಖರಾದ ಲಕ್ಷ್ಮಣ ಉಪ್ಪಾರ, ದತ್ತಾತ್ರೇಯ ಕಂದುಕೂರ, ಬಿ.ಎಲ್. ಹೆಗಡೆ, ಪಾಂಡುರಂಗ ಪವಾರ್, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಗಮ ಹಂಜಿ, ಶಿವಯ್ಯ ಹಿರೇಮಠ, ಅಮೋಲ್ ದೇಶ ಕುಲಕರ್ಣಿ ನವೀನ್ ಹತ್ತಿಬೆಳಗಲ್, ಸಚಿನ್ ಗಾಣಗೇರ, ರಾಜು ಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.