ಧಾರವಾಡ: ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ (14 ಹಾಗೂ 17 ವರ್ಷದೊಳಗಿನವರ ವಿಭಾಗ) ಹಾಕಿ ಟೂರ್ನಿಯಲ್ಲಿ ಧಾರವಾಡದ ಜಿಲ್ಲಾ ತಂಡಗಳು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ.
ಶಾಲಾ ಶಿಕ್ಷಣ ಇಲಾಖೆ ಹಾಗು ಯೂನಿವರ್ಸಿಟಿ ಪಬ್ಲಿಕ್ ಶಾಲೆ ವತಿಯಿಂದ ನಡೆದ ಕ್ರೀಡಾಕೂಟದಲ್ಲಿ ಯೂನಿವರ್ಸಿಟಿ ಪಬ್ಲಿಕ್ ಶಾಲೆಯ ಕ್ರೀಡಾಪಟುಗಳು ನಾಲ್ಕು ವಿಭಾಗಗಳಲ್ಲಿ ಗೆದ್ದು ಟ್ರೋಫಿ ಪಡೆದಿದ್ಧಾರೆ. ಟೂರ್ನಿ ಫಲಿತಾಂಶ ಇಂತಿದೆ.
ಬಾಲಕರ ವಿಭಾಗ (14 ವರ್ಷದೊಳಗಿನವರು): ಧಾರವಾಡದ ಯೂನಿವರ್ಸಿಟಿ ಪಬ್ಲಿಕ್ ಶಾಲೆ–ಪ್ರಥಮ, ಬೆಳಗಾವಿ ಜಿಲ್ಲೆ ಚಂದರಗಿಯ ಸ್ಪೋರ್ಟ್ಸ್ ಸ್ಕೂಲ್– ದ್ವಿತೀಯ
ಬಾಲಕಿಯರ ವಿಭಾಗ: ಧಾರವಾಡದ ಯೂನಿವರ್ಸಿಟಿ ಪಬ್ಲಿಕ್ ಶಾಲೆ–ಪ್ರಥಮ, ಚಿಕ್ಕೋಡಿಯ ಚಿಂಚಲಿಯ ರಿವರ್ ಸೈಡ್ ಇಂಗ್ಲಿಷ್ ಮೀಡಿಯಂ ಸ್ಕೂಲ್ –ದ್ವಿತೀಯ
ಬಾಲಕರ ವಿಭಾಗ (17 ವರ್ಷದೊಳಗಿನವರು): ಧಾರವಾಡದ ಯೂನಿವರ್ಸಿಟಿ ಪಬ್ಲಿಕ್ ಶಾಲೆ–ಪ್ರಥಮ, ಬೆಳಗಾವಿ ಜಿಲ್ಲೆ ಚಂದರಗಿಯ ಸ್ಪೋರ್ಟ್ಸ್ ಸ್ಕೂಲ್ –ದ್ವಿತೀಯ
ಬಾಲಕಿಯರ ವಿಭಾಗ: ಧಾರವಾಡದ ಯೂನಿವರ್ಸಿಟಿ ಪಬ್ಲಿಕ್ ಶಾಲೆ– ಪ್ರಥಮ, ಬೆಳಗಾವಿ ಜಿಲ್ಲೆಯ ತಿಳಕವಾಡಿಯ ಜಿಜಿಸಿ ಆಂಗ್ಲಮಾಧ್ಯಮ ಶಾಲೆ– ದ್ವಿತೀಯ ಸ್ಥಾನ ಪಡೆದಿದೆ.
ಬಾಲಕರ ವಿಭಾಗದಲ್ಲಿ (14 ವರ್ಷದೊಳಗಿನವರು) ಆರು, ಬಾಲಕಿಯರ ವಿಭಾಗದಲ್ಲಿ ಐದು, ಹಾಗೂ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಐದು ಮತ್ತು ಬಾಲಕಿಯರ ವಿಭಾಗದಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದರು. ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ವಿಷ್ಣು ಹೆಬ್ಬಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.