
ಪ್ರಜಾವಾಣಿ ವಾರ್ತೆ
ಹುಬ್ಬಳ್ಳಿಯ ಈದ್ಗಾ ಮೈದಾನ
ಹುಬ್ಬಳ್ಳಿ: ‘ಸುನ್ನಿ ದಾವತೆ ಇಸ್ಲಾಮಿ (ಎಸ್‌ಡಿಐ) 28ನೇ ರಾಜ್ಯಮಟ್ಟದ ವಾರ್ಷಿಕ ಸಮ್ಮೇಳನ ‘ಸುನ್ನಿ ಇಜ್ತೆಮಾ’ ಅನ್ನು ಜ.3 ಮತ್ತು 4ರಂದು ನಗರದ ಕಾರವಾರ ರಸ್ತೆಯ ಈದ್ಗಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಹುಬ್ಬಳ್ಳಿ ಸುನ್ನಿ ದಾವತೆ ಇಸ್ಲಾಮಿ ಅಧ್ಯಕ್ಷ ಮೆಹಬೂಬ್ ಕಲೈಗಾರ ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ.3ರಂದು ಮಹಿಳೆಯರ ಸಮ್ಮೇಳನ , ‘ಜ.4ರಂದು ಪುರುಷರ ಸಮ್ಮೇಳನ ನಡೆಯಲಿದೆ. ಶಿಕ್ಷಣ ಜಾಗೃತಿ, ವೃತ್ತಿ ಕೌಶಲಾಭಿವೃದ್ಧಿ ಹಾಗೂ ಮಾನವೀಯ ಮೌಲ್ಯಗಳ ಅರಿವು ಮೂಡಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.